ಡಿಸೆಂಬರ್ 25ರಂದು ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ವತಿಯಿಂದ ‘ಕ್ರಿಸ್’ಮಸ್ ಟ್ರೋಫಿ—2023′ | ವಾಲಿಬಾಲ್, ಹಗ್ಗಜಗ್ಗಾಟ ಕ್ರೀಡಾಕೂಟ

ಬೆಳ್ತಂಗಡಿ: ಕ್ರಿಸ್ ಮಸ್ ಪ್ರಯುಕ್ತ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ(ರಿ) ಇದರ ಪ್ರಾಯೋಜಕತ್ವದಲ್ಲಿ 2ನೇ ವರ್ಷದ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಕ್ರೀಡಾಕೂಟ ‘ಕ್ರಿಸ್’ಮಸ್ ಟ್ರೋಫಿ—2023’ ಕಳೆಂಜದ ಕಾಯರ್ತಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಿಸೆಂಬರ್ 25ರಂದು ಸಂಜೆ 4 ಗಂಟೆಗೆ ಆರಂಭಗೊಳ್ಳಲಿದೆ.
ಕ್ರೀಡಾಕೂಟದಲ್ಲಿ ಆಹ್ವಾನಿತ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ(ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ) ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಹಗ್ಗಜಗ್ಗಾಟ ನಡೆಯಲಿದೆ.
ಹಗ್ಗಜಗ್ಗಾಟದಲ್ಲಿ ಒಂದು ತಂಡದಲ್ಲಿ 630 ಕೆ.ಜಿ. ಹಾಗೂ 7+1 ಮಂದಿಗೆ ಮಾತ್ರ ಮತ್ತು ತಂಡದಲ್ಲಿ ಒಂದೇ ಪಿನ್ ಕೋಡ್ ನ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಬಹುಮಾನಗಳು:
ವಾಲಿಬಾಲ್
ಪ್ರಥಮ : ರೂ. 15,000
ದ್ವಿತೀಯ : ರೂ.10,000
ತೃತೀಯ : ರೂ. 5,000
ಮತ್ತು ಕ್ರಿಸ್ ಮಸ್ ಟ್ರೋಫಿ
ಬೆಸ್ಟ್ ಪಾಸರ್, ಬೆಸ್ಟ್ ಅಟ್ಯಾಕರ್ ಮತ್ತು ಆಲ್ ರೌಂಡರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹಗ್ಗಜಗ್ಗಾಟ:
ಪ್ರಥಮ : ರೂ. 8,000
ದ್ವಿತೀಯ : ರೂ. 5,000
ಮತ್ತು ಕ್ರಿಸ್ ಮಸ್ ಟ್ರೋಫಿ
ಹಗ್ಗಜಗ್ಗಾಟ ತಂಡದ ಪ್ರವೇಶ ಶುಲ್ಕ ರೂ. 500 ಹಾಗೂ ವಾಲಿಬಾಲ್ ತಂಡದ ಪ್ರವೇಶ ಶುಲ್ಕ ರೂ. 1000 ನಿಗದಿ ಪಡಿಸಲಾಗಿದೆ.
ಸಂಜೆ 5ಕ್ಕೆ ಆರಂಭವಾಗಲಿರುವ ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಅಧ್ಯಕ್ಷರಾದ ಜೋಸೆಫ್ ಕೆ.ಡಿ. ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಳೆಂಜ ಮತ್ತು ಬಟ್ಯಾಲ್ ಚರ್ಚ್ ನ ಧರ್ಮಗುರುಗಳಾದ ರೇ.ಫಾ. ಜೋಸೆಫ್ ವಾಳೂಕಾರನ್, ಕಳೆಂಜ ಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ, ಕಳೆಂಜ ಗ್ರಾ.ಪಂ. ಉಪಾಧ್ಯಕ್ಷರಾದ ಮಂಜುನಾಥ್ ಹೆಚ್., ಉಪ್ಪಿನಂಗಡಿ ವಲಯ, ಕಳೆಂಜ ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಶಾಂತ್, ಕ್ರಿಶ್ಚಿಯನ್ ಬ್ರದರ್ಸ್ ಗೌರವಾಧ್ಯಕ್ಷರಾದ ಸಭಾಸ್ಟಿನ್ ಪಿ.ಟಿ. ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಳೆಂಜ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಕುಂಞ್ಞಮ್ಮ ಪಿ., ಕಳೆಂಜ ಶಾಲೆಯ ಸಹ ಶಿಕ್ಷಕರಾದ ಮೇರಿ ಎನ್.ಜೆ., ಕಳೆಂಜ ಶಾಲೆಯ ಶಿಕ್ಷಕಿ ರೋಸಮ್ಮ ವಿ.ಟಿ., ಶಿಕ್ಷಕಿ ತ್ರೆಸಿಯ ಕೆ.ವಿ., ಶಾಲೆತ್ತಡ್ಕ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಎಲಿಯಮ್ಮ ಪಿ.ಟಿ., ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯಮಟ್ಟದ ಕರಾಟೆ ಕ್ರೀಡಾಪಟು ಆಡ್ಲಿನ್ ಎಲಿಜಬೆತ್ ಜೆರಿನ್ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.