ಓಟು ಕೇಳೋಕೆ ಬನ್ನಿ ನಿಮಗೆ ಮಾಡ್ತೀವಿ: ಗೃಹ ಲಕ್ಷ್ಮೀ ಹಣ ಬಾರದಿದ್ದಕ್ಕೆ ಸರ್ಕಾರಕ್ಕೆ ಮಹಿಳೆ ತರಾಟೆ

girhalakshmi
27/01/2025

ಚಿಕ್ಕಮಗಳೂರು: ನಾವು ದುಡ್ಡು ಕೇಳಿದ್ವಾ, ಹಣ ಕೊಡಿ ಅಂತ ಕೇಳಿದ್ವಾ? ಕೊಡ್ತೀವಿ ಅಂತಾ ಹೇಳಿ ಏಕೆ ಹೀಗೆ ಮಾಡ್ತಿದ್ದೀರಾ ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಮಹಿಳೆಯೊಬ್ಬರು ತರಾಟೆಗೆತ್ತಿಕೊಂಡಿದ್ದಾರೆ.

ಗೃಹಲಕ್ಷ್ಮಿ ಹಣ ಬಾರದಿದ್ದಕ್ಕೆ ಸರ್ಕಾರವನ್ನು ತರಾಟೆಗೆತ್ತಿಕೊಂಡಿರುವ ಮಹಿಳೆ, ಏಕೆ ನಮ್ಮನ್ನ ಅಯ್ಯೋ ಅನ್ನುಸ್ಕಂಡು ತಿಂತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಕ್ರಾಂತಿಯಿಂದ ಇಲ್ಲಿವರೆಗೂ ದಿನಾ ಒಂದೊಂದು ಕಥೆ ಹೇಳ್ತೀದ್ದೀರಾ, ಇವತ್ತು…ನಾಳೆ… 10.30, 11.30, 12.35 ಎಲ್ಲಾ ಹಾಳು ಬಿದ್ದೋಯ್ತು, ದುಡ್ಡು ಬರ್ಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓಟು ಕೇಳೋಕೆ ಬನ್ನಿ ನಿಮಗೆ ಮಾಡ್ತೀವಿ, ಎಂದು ಸರ್ಕಾರಕ್ಕೆ ಮಹಿಳೆ ತರಾಟೆಗೆತ್ತಿಕೊಂಡ ವಿಡಿಯೋ ವೈರಲ್ ಆಗಿದೆ. ಮಹಿಳೆ ಕಾಫಿ ತೋಟದಲ್ಲಿ ಕಾಫಿ ಕೊಯ್ಯುತ್ತಾ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ

Exit mobile version