ಬಿಗ್ ಬಾಸ್ ಕನ್ನಡ ಸೀಸನ್ 13: ದೊಡ್ಮನೆಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳ ಸಂಪೂರ್ಣ ವಿವರ!
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಅದ್ಧೂರಿಯಾಗಿ ಆರಂಭಗೊಂಡಿದ್ದು, ಬರೋಬ್ಬರಿ 16 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಈ ಬಾರಿಯ ಸೀಸನ್ನಲ್ಲಿ ಮನರಂಜನಾ ಲೋಕದ ಪರಿಚಿತ ಮುಖಗಳ ಜೊತೆಗೆ ಹಲವು ಹೊಸ ಪ್ರತಿಭೆಗಳು ಹಾಗೂ ಕಾಮನ್ ಮ್ಯಾನ್ ಸ್ಪರ್ಧಿಗಳು ಕೂಡ ದೊಡ್ಮನೆ ಪ್ರವೇಶಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಎಂಟ್ರಿ ನೀಡಿರುವ 16 ಸ್ಪರ್ಧಿಗಳ ಸಂಕ್ಷಿಪ್ತ ವಿವರ ಇಲ್ಲಿದೆ:
ಆಸಿಯಾ ಫಿರ್ದೋಸ್: ‘ಕನ್ಯಾಕುಮಾರಿ’ ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಆಸಿಯಾ ಫಿರ್ದೋಸ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಅವಿನಾಶ್ ಶತಮರ್ಷನ್: ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಅವಿನಾಶ್ ಶತಮರ್ಷನ್, 2018ರ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾದಲ್ಲಿ ನಟಿಸಿದ್ದರು.
ಗಗನ್ ಚಿನ್ನಪ್ಪ: ‘ಮಂಗಳ ಗೌರಿ ಮದುವೆ’ ಹಾಗೂ ‘ಸೀತಾ ರಾಮ ಕಲ್ಯಾಣ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಗಗನ್ ಚಿನ್ನಪ್ಪ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಜಗದೀಶ್ (ಜಗ್ಗ ಮಮ್ಮಿ): ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿರುವ, ಮೈಸೂರಿನ ಮಹದೇವಪುರದವರಾದ ಜಗದೀಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ‘ಜಗ್ಗ ಮಮ್ಮಿ’ ಎಂದೇ ಖ್ಯಾತಿ ಪಡೆದಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ಇವರು ಆಪ್ತರು.
ಕಿರಣ್ ಶಾಸ್ತ್ರಿ: ಉತ್ತರ ಕರ್ನಾಟಕದವರಾದ ಕಿರಣ್ ಶಾಸ್ತ್ರಿ ಅವರು ‘ಅಗ್ನಿಪರೀಕ್ಷೆ’ ಶೋ ಮೂಲಕ ಗಮನ ಸೆಳೆದಿದ್ದರು. ಇವರು ಕಾಮನ್ ಮ್ಯಾನ್ (ಸಾಮಾನ್ಯ ಸ್ಪರ್ಧಿ) ಆಗಿ ದೊಡ್ಮನೆ ಪ್ರವೇಶಿಸಿದ್ದಾರೆ.
ಲಿಖಿತ್ ಗೊಂದಿ: ‘ಅಗ್ನಿಪರೀಕ್ಷೆ’ಯಲ್ಲಿ ತಮ್ಮ ಆಟದ ಮೂಲಕ ಗಮನ ಸೆಳೆದಿದ್ದ ಲಿಖಿತ್ ಗೊಂದಿ ಈಗ ಬಿಗ್ ಬಾಸ್ ವೇದಿಕೆ ಏರಿದ್ದಾರೆ.
ಮಾಡರ್ನ್ ಮಹಾಕವಿ ಮಂಜು: ‘ಅಗ್ನಿಪರೀಕ್ಷೆ’ಯ ಜಡ್ಜ್ಗಳ ವಿಶೇಷ ಆಯ್ಕೆಯ ಮೂಲಕ ಮಾಡರ್ನ್ ಮಹಾಕವಿ ಮಂಜು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ.
ಧನುಷ್: ಗಿನ್ನೆಸ್ ದಾಖಲೆ ವಿಚಾರವಾಗಿ ಸದ್ದು ಮಾಡಿದ್ದ ಧನುಷ್, ಅಗ್ನಿಪರೀಕ್ಷೆಯ ಮೂಲಕ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಓಂ ಪ್ರಕಾಶ್ ರಾವ್: ಕನ್ನಡದ ಚಲನಚಿತ್ರ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಈಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 4’ರಲ್ಲಿ ಭಾಗವಹಿಸಿದ್ದರು. ಅನಾರೋಗ್ಯದ ಕಾರಣದಿಂದ ಹಿಂದೆ ಹೊರಬಂದಿದ್ದ ಅವರು, ಈಗ ಮತ್ತೊಮ್ಮೆ ದೊಡ್ಮನೆಗೆ ಮರಳಿದ್ದಾರೆ.
ಪ್ರಥಮಾ ಪ್ರಸಾದ್: ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿಯಾದ ಪ್ರಥಮಾ ಪ್ರಸಾದ್ ಈ ಸೀಸನ್ನ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
ಸಂಗೀತಾ ಭಟ್: ಹಲವು ವರ್ಷಗಳಿಂದ ಸ್ಯಾಂಡ್ವುಡ್ನಲ್ಲಿ ಗುರುತಿಸಿಕೊಂಡಿರುವ ನಟಿ ಸಂಗೀತಾ ಭಟ್, ಕೆಲಕಾಲ ಸಿನಿಮಾದಿಂದ ದೂರವಿದ್ದು ಈಗ ಬಿಗ್ ಬಾಸ್ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಕಾವ್ಯಾ ಗೌಡ: ‘ಭಾಗ್ಯಕ್ಷ್ಮೀ’ ಧಾರಾವಾಹಿಯಲ್ಲಿ ‘ಶ್ರೇಷ್ಠ’ ಎಂಬ ವಿಭಿನ್ನ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ಕಾವ್ಯಾ ಗೌಡ, ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಆಡಲಿದ್ದಾರೆ ಎಂಬ ಕುತೂಹಲ ಮೂಡಿಸಿದ್ದಾರೆ.
ಸೌಂದರ್ಯಾ ಶೆಟ್ಟಿ: ಮಸ್ಕತ್ ನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದು, ಪ್ರಸ್ತುತ ಮುಂಬೈನಲ್ಲಿರುವ ಸೌಂದರ್ಯಾ ಶೆಟ್ಟಿ ಅವರು ಈ ಹಿಂದೆ ಜನಪ್ರಿಯ ರಿಯಾಲಿಟಿ ಶೋ ‘ಸ್ಪಿಟ್ಸ್ ವಿಲ್ಲಾ’ದಲ್ಲಿ ಭಾಗವಹಿಸಿದ್ದರು.
ಹೀಗೆ ಒಟ್ಟು 16 ಸ್ಪರ್ಧಿಗಳ ವಿಭಿನ್ನ ಹಿನ್ನೆಲೆಯುಳ್ಳ ತಂಡವು ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮನರಂಜನೆ ನೀಡಲು ಸಿದ್ಧವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD






















