JioPCಯಿಂದ ಹೊಸ ಕ್ರಾಂತಿ: ಹಳೆಯ ಕಂಪ್ಯೂಟರ್‌ ಗಳೇ ಇನ್ನು ಮುಂದೆ ಸೂಪರ್ ಫಾಸ್ಟ್!

jiopc
04/09/2026

ನಿಮ್ಮ ಹಳೆಯ ಲ್ಯಾಪ್‌ ಟಾಪ್ ಅಥವಾ ಡೆಸ್ಕ್‌ ಟಾಪ್ ನಿಧಾನವಾಗಿದ್ದರೆ, ಹೊಸ ಕಂಪ್ಯೂಟರ್ ಖರೀದಿಸಲು ಸಾವಿರಾರು ರೂ.ಗಳನ್ನು ಖರ್ಚು ಮಾಡುವ ಅಗತ್ಯವಿಲ್ಲ. ರಿಲಯನ್ಸ್ ಜಿಯೋಪಿಸಿ (JioPC) ಮೂಲಕ ನಿಮ್ಮ ಹಳೆಯ ಡಿವೈಸ್ ಅನ್ನೇ ಕ್ಲೌಡ್ ತಂತ್ರಜ್ಞಾನದ ಸಹಾಯದಿಂದ ಅತ್ಯಂತ ಶಕ್ತಿಶಾಲಿ ಎಐ–ರೆಡಿ (AI-Ready) ಕಂಪ್ಯೂಟರ್ ಆಗಿ ಬದಲಾಯಿಸಿಕೊಳ್ಳಬಹುದು.

ಹೊಸ ಹಾರ್ಡ್‌ವೇರ್ ಖರೀದಿಸದೆಯೇ ಕ್ಲೌಡ್ ಮೂಲಕ 16 GB RAM ಮತ್ತು 1 TB ವರೆಗೆ ಸಂಗ್ರಹಣೆ (Storage) ಸೌಲಭ್ಯ ಪಡೆಯಬಹುದು.

ಈ ಸೇವೆಯನ್ನು ಯಾವುದೇ ಟೆಲಿಕಾಂ ಅಥವಾ ಬ್ರಾಡ್‌ ಬ್ಯಾಂಡ್ ಇಂಟರ್ನೆಟ್ ಬಳಕೆದಾರರು ಸ್ವತಂತ್ರವಾಗಿ ಪಡೆದುಕೊಳ್ಳಬಹುದು.

ಕೇವಲ 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಇದನ್ನು ಸಕ್ರಿಯಗೊಳಿಸಬಹುದಾಗಿದ್ದು, ಯಾವುದೇ ಡೇಟಾ ಮೈಗ್ರೇಷನ್ ತೊಂದರೆ ಇರುವುದಿಲ್ಲ.

ಎಂಟು ವರ್ಷ ಹಳೆಯ ಕಂಪ್ಯೂಟರ್ ಕೂಡ ಇಂದಿನ ಎಐ ಆಧಾರಿತ ಭಾರಿ ಅಪ್ಲಿಕೇಶನ್‌ ಗಳನ್ನು ಸುಲಭವಾಗಿ ನಿರ್ವಹಿಸುವಂತೆ ಇದು ಸಬಲಗೊಳಿಸುತ್ತದೆ.

ಬೆಲೆ ವಿವರ:

  • 8 GB RAM ಮತ್ತು 500 GB ಸ್ಟೋರೇಜ್ ಹೊಂದಿರುವ ಎರಡು ತಿಂಗಳ ಯೋಜನೆಗೆ 1,000 ರೂಪಾಯಿ.
  • 16 GB RAM ಮತ್ತು 1 TB ಸ್ಟೋರೇಜ್ ಹೊಂದಿರುವ ಜಿಯೋಪಿಸಿ ಅಲ್ಟ್ರಾ ಎರಡು ತಿಂಗಳ ಯೋಜನೆಗೆ 1,200 ರೂಪಾಯಿ.
  • ಐದು ತಿಂಗಳ ಯೋಜನೆಗಳ ಬೆಲೆ ಕ್ರಮವಾಗಿ 2,000 ಮತ್ತು 2,500 ರೂಪಾಯಿಗಳು.
  • 12 ತಿಂಗಳ (10+2 ತಿಂಗಳು) ವಾರ್ಷಿಕ ಯೋಜನೆಗಳ ಬೆಲೆ 4,000 ಮತ್ತು 5,000 ರೂಪಾಯಿಗಳು.

ಗಮನಿಸಿ: ಜಿಯೋಪಿಸಿ ಕ್ಲೌಡ್ ಆಧಾರಿತವಾಗಿರುವುದರಿಂದ ಇದನ್ನು ಬಳಸಲು ಉತ್ತಮ ಹಾಗೂ ಸ್ಥಿರವಾದ ಇಂಟರ್ನೆಟ್ (ಬ್ರಾಡ್‌ಬ್ಯಾಂಡ್ ಅಥವಾ ವಿಶ್ವಾಸಾರ್ಹ 4G/5G) ಸಂಪರ್ಕ ಬೇಕಾಗುತ್ತದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi
Exit mobile version