10:53 AM Tuesday 8 - September 2026

ಹನುಮ ಜನ್ಮ ಸ್ಥಳ ವಿವಾದ: ಧರ್ಮ ಸಂಸತ್ ನಲ್ಲಿ ಸ್ವಾಮೀಜಿಗಳ ಕಿರಿಕ್:  ಮೈಕ್ ನಿಂದ ಹೊಡೆಯಲು ಹೋದ ಸ್ವಾಮೀಜಿ!

dharma samsad
01/06/2022

ಮುಂಬೈ : ಹನುಮನ ಜನ್ಮಸ್ಥಳ ಯಾವುದು..? ಅಂಜನಾದ್ರಿನಾ? ಅಂಜನೇರಿನಾ? ತಿರುಮಲನಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಸಿಕ್‍ ನಲ್ಲಿ ಸೇರಿದ ಧರ್ಮ ಸಂಸದ್‍ ಭಾರೀ ಗಲಾಟೆಯಲ್ಲಿಅಂತ್ಯವಾಗಿದೆ.

ಸಭೆಯಲ್ಲಿ ಸೇರಿದ್ದ ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಹನುಮಾನ್ ಜನ್ಮಭೂಮಿ ಕ್ಷೇತ್ರದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ತಿರುಗಿಬಿದ್ದಿದ್ದಾರೆ. ಹಿಂದೆ ರಾವಣ ಸೀತೆಯನ್ನು ಹೊತ್ತೊಯ್ದಿದ್ದ, ಆದರೆ ಈಗ ನೀವು ಹನುಮಂತನ ಜನ್ಮಸ್ಥಳವನ್ನೇ ಹೈಜಾಕ್ ಮಾಡ್ತಿದ್ದೀರಿ ಅಂತಾ ಆರೋಪಿಸಿದ್ದಾರೆ. ಸುಮ್ನೆ ಮಾತಾಡೋದಲ್ಲ, ದಾಖಲೆ ಕೊಡಿ ಅಂತಾ ಸವಾಲ್ ಹಾಕಿದ್ದಾರೆ. ಈ ಹಂತದಲ್ಲಿ, ಮಹಾಂತ ಸುಧೀರದಾಸರು, ಆದಿಗುರು ಶಂಕರಾಚಾರ್ಯರನ್ನು ಕಾಂಗ್ರೆಸ್ಸಿಗ ಎಂದಿದ್ದು ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿಯ ಆಕ್ರೋಶಕ್ಕೆ ಕಾರಣವಾಯ್ತು.

ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ರು. ಈ ವೇಳೆ ಮಹಾಂತ ಸುಧೀರ್ ದಾಸರು, ಮೈಕ್ ಹಿಡಿದು ಹಲ್ಲೆಗೆ ಮುಂದಾಗಿದ್ದು ,ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಗೋವಿಂದಾನಂದ ಸ್ವಾಮೀಜಿ, ಸ್ವಾಮೀಜಿಗಳಿಗೆ ಅಪಮಾನ ಮಾಡ್ತೀರಾ..? ನೀವು ಈ ಧರ್ಮಸಂಸದ್‍ ಗೆ ಕಳಂಕ.. ಕೂಡ್ಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ್ರು. ಕೊನೆಗೆ ಉಳಿದವರು ಸಮಾಧಾನ ಮಾಡೋ ಕೆಲಸ ಮಾಡಿದ್ರು.

ಆದರೆ ನಾನು ಹಲ್ಲೆ ಮಾಡಲು ಯತ್ನಿಸಿಲ್ಲ. ಅವರೇ ಹಲ್ಲೆ ಮಾಡಿದರು ಎಂದು ನಾಟಕ ಮಾಡಿದ್ದಾರೆ ಎಂದು ಸುಧೀರ್ ದಾಸರು ಆರೋಪ ಮಾಡಿದ್ದಾರೆ. ಇದಕ್ಕೂ ಮುನ್ನ ಧರ್ಮಸಂಸದ್‍ ನಲ್ಲಿ ಭಾಗವಹಿಸದಂತೆ ಗೋವಿಂದಾನಂದ ಸ್ವಾಮೀಜಿಗೆ ತಡೆ  ಒಡ್ಡಿದ ಮಹಾರಾಷ್ಟ್ರ ಪೊಲೀಸರು ನೀವು ಹನುಮನ ಜನ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿದ್ದೀರಿ. ಇದರಿಂದ ಅಂಜನೇರಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನೀವು ಧರ್ಮಸಂಸದ್‍ ನಲ್ಲಿ ಭಾಗವಹಿಸಬೇಡಿ. ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಆದರೆ ಇದನ್ನು ನಿರ್ಲಕ್ಷಿಸಿದ  ಸ್ವಾಮೀಜಿ ಧರ್ಮಸಂಸದ್‍ ನಲ್ಲಿ ಪಾಲ್ಗೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಂಗೀತ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಗಾಯಕ

ಸರ್ಕಾರಕ್ಕೆ ಮತ್ತೆ ತಲೆನೋವು: ಕವಿತೆ, ಲಲಿತ ಪ್ರಬಂಧ ವಾಪಸ್‌ ಪಡೆದ ಇಬ್ಬರು ಲೇಖಕರು

ವಿಮಾನ ನಿಲ್ದಾಣದ ಪ್ರದರ್ಶನ ಫಲಕದಲ್ಲಿ ಅಶ್ಲೀಲ ಚಿತ್ರ ಪ್ರಸಾರ!

ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಗೆ ಗೇಟ್ ಪಾಸ್!

ಇತ್ತೀಚಿನ ಸುದ್ದಿ

mobil chat sitesi
Exit mobile version