9:22 PM Thursday 29 - January 2026

ಕೊರೊನಾ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ರಾಗಿಣಿ ಆರೋಗ್ಯ ಸ್ಥಿತಿ ಗಂಭೀರ

01/12/2020

ನವದೆಹಲಿ:  ಕೊವಿಡ್ 19 ನಿಂದಾಗಿ ತೀವ್ರ ಆರೋಗ್ಯ ಹದಗೆಟ್ಟ ಪರಿಣಾಮ ಕಾಂಗ್ರೆಸ್ ಮುಖಂಡ ರಾಗಿಣಿ ನಾಯಕ್ ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದೆ.


ನನ್ನ ಆರೋಗ್ಯ ಸ್ಥಿತಿ ಕಳೆದ ರಾತ್ರಿ ಹದಗೆಟ್ಟಿದೆ.ೀ ರೋಗದ ವಿರುದ್ಧ ಹೋರಾಡಲು ನಾನು ಅತ್ಯುತ್ತಮವಾಗಿ ಪ್ರಯತ್ನಿಸುತ್ತೇನೆ.  ಉಳಿದವು ದೇವರ ಕೈಯಲ್ಲಿದೆ ಎಂದು ರಾಗಿಣಿ ನಾಯಕ್ ಟ್ವೀಟ್ ಮಾಡಿದ್ದಾರೆ.

ರಾಗಿಣಿ ನಾಯಕ್ ಅವರ ಪತಿ ಅಶೋಕ್ ಬಸೋಯಾ ಕೂಡ ಕಾಂಗ್ರೆಸ್ ನಾಯಕರಾಗಿದ್ದಾರೆ.  ರಾಗಿಣಿ ನಾಯಕ್ ಅವರು ಟಿವಿ ಚಾನೆಲ್ ಡಿಬೆಟ್ ಗಳಲ್ಲಿ ಕಾಂಗ್ರೆಸ್ ನ್ನು ಪ್ರತಿನಿಧಿಸುತ್ತಿದ್ದರು. ಇನ್ನೂ ರಾಗಿಣಿ ನಾಯಕ್ ಅವರ ಆರೋಗ್ಯ ಸ್ಥಿತಿ ಸುಧಾರಿಸಲು ಅವರ ಜೊತೆಗಾರ್ತಿಯರಾದ ಸುಪ್ರಿಯಾ ಶ್ರೀನಾಟೆ ಮತ್ತು ಅಲ್ಕಾ ಲಾಂಬಾ ಪ್ರಾರ್ಥಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version