4:03 AM Thursday 4 - December 2025

ಅನಾಥಾಶ್ರಮದಲ್ಲಿ ಈಸ್ಟರ್ ಆಚರಿಸಿದ  “ಮಾನವ ಪ್ರೇಮಿ” ರಾಹುಲ್ ಗಾಂಧಿ | ವಿಡಿಯೋ ಕಾಲ್ ನಲ್ಲಿ ಬಂದಿದ್ದು ಯಾರು ಗೊತ್ತಾ?

rahul gandhi
04/04/2021

ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದಾ ಸುದ್ದಿಯಾಗುವುದು ಮಾನವ ಪ್ರೀತಿಗಾಗಿ. ರಾಹುಲ್ ಗಾಂಧಿ ಬಳಿಗೆ ಎಂತಹ ಬಡವರು ಕೂಡ ಹೋಗಬಹುದು ಅನ್ನೋದಕ್ಕಿಂತಲೂ ಬಡವರನ್ನು ಕಂಡರೆ, ರಾಹುಲ್ ಗಾಂಧಿಯೇ ತಮ್ಮ ಭದ್ರತೆಯನ್ನೂ ನಿರ್ಲಕ್ಷಿಸಿ ನೇರವಾಗಿ ಹೊರಟು ಬಿಡುತ್ತಾರೆ. ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕ ಕೂಡ ಇದೇ ಸ್ವಭಾವನನ್ನು ಹೊಂದಿದ್ದಾರೆ. ಈ ಮಾನವ ಪ್ರೀತಿಗೆ ರಾಹುಲ್ ಹಾಗೂ ಪ್ರಿಯಾಂಕ ಸದಾ ಸುದ್ದಿಯಾಗುತ್ತಾರೆ.

ಇದೀಗ ರಾಹುಲ್ ಗಾಂಧಿ ಕೇರಳದ ವಯನಾಡ್ ನಲ್ಲಿ ಅನಾಥಾಶ್ರಮವೊಂದರಲ್ಲಿ ಅನಾಥ ಮಕ್ಕಳ ಜೊತೆಗೆ ಊಟ ಮಾಡಿ ಸುದ್ದಿಯಾಗಿದ್ದಾರೆ. ಬರೇ ಊಟ ಮಾಡಿದ್ದರೆ ಸುದ್ದಿಯಾಗುತ್ತಿರಲಿಲ್ಲ. ತಾವು ಊಟ ಮಾಡುತ್ತಿದ್ದ ವೇಳೆ ತನ್ನ ಸಹೋದರಿ ಪ್ರಿಯಾಂಕ ಗಾಂಧಿಗೆ ವಿಡಿಯೋ ಕಾಲ್ ಮಾಡಿದ ರಾಹುಲ್ ಗಾಂಧಿ, ತನ್ನ ಜೊತೆಗಿದ್ದ ಮಕ್ಕಳ ಜೊತೆಗೆ ಮಾತನಾಡಿಸಿದರು.

ರಾಹುಲ್ ಗಾಂಧಿ ಇಂದು ತಮ್ಮ ಕ್ಷೇತ್ರವಾದ ವಯನಾಡ್ ನ ಕಲ್ಪೆಟ್ಟಾ ಜೀವನ್ ಜ್ಯೋತಿ ಅನಾಥಾಶ್ರಮದಲ್ಲಿ ಈಸ್ಟರ್ ಪ್ರಯುಕ್ತ ಮಕ್ಕಳ ಜೊತೆಗೆ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆಗೆ ಮಾತನಾಡುತ್ತಿದ್ದ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ವಿಡಿಯೋ ಕಾಲ್ ನಲ್ಲಿ ಮಕ್ಕಳ ಜೊತೆಗೆ ಪ್ರಿಯಾಂಕಾ ಗಾಂಧಿ ಕೂಡ ಮಾತನಾಡಿದ್ದಾರೆ. ಈ ವಿಡಿಯೋವನ್ನು ಎಎನ್ ಐ ಟ್ವೀಟ್ ಮಾಡಿದೆ.

ರಾಹುಲ್ ಗಾಂಧಿ ಬಗ್ಗೆ ಯಾರು ಏನೇ ಹೇಳಲಿ, ಆದರೆ, ರಾಜಕೀಯ ರಂಗದಲ್ಲಿ ಮಾನವ ಪ್ರೀತಿ ತೋರುವಲ್ಲಿ ರಾಹುಲ್ ಹಾಗೂ ಪ್ರಿಯಾಂಕ ಇಬ್ಬರನ್ನು ಮೀರಿಸುವವರು ಇಲ್ಲಿಯವರೆಗೆ ಬಂದಿಲ್ಲ. ಐಷಾರಾಮಿ ಕಾರಿನಲ್ಲಿ ಬರುವ ದೊಡ್ಡ ದೊಡ್ಡ ಸಚಿವರು ತಮ್ಮ ಬಳಿಗೆ ಕೂಡ ಯಾರನ್ನೂ ಬಿಡಲ್ಲ. ಅಷ್ಟೇ ಯಾಕೆ, ಜಾತಿ ಧರ್ಮದ ಹೆಸರಿನಲ್ಲಿ ಓಟು ಕೇಳಿ ಗೆದ್ದ ಶಾಸಕ, ತನ್ನ ಜಾತಿಯವರನ್ನೇ ಗೆದ್ದ ಬಳಿಕ ಸಮೀಪವೂ ಬಿಡುವುದಿಲ್ಲ ಅಂತಹದ್ದರಲ್ಲಿ ರಾಹುಲ್ ಗಾಂಧಿ ಅವರ ಈ ಮಾನವ ಪ್ರೇಮಕ್ಕೆ ಸೆಲ್ಯೂಟ್ ಹೊಡೆಯಲೇ ಬೇಕು.

ಇತ್ತೀಚಿನ ಸುದ್ದಿ

Exit mobile version