12:28 AM Thursday 21 - August 2025

ಬ್ಯಾರಿಕೇಡ್ ಮುರಿದು ದೆಹಲಿ ಪ್ರವೇಶಿಸಿದ ರೈತರು | ಪೊಲೀಸರು ಅಶ್ರುವಾಯು ಸಿಡಿಸಿದ ಭಯಾನಕ ವಿಡಿಯೋ ನೋಡಿ

26/01/2021

ದೆಹಲಿ: ರೈತರು ಇಂದು ದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಇಂದು ಮುಂಜಾನೆ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸಿದ್ದು,  ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ದೆಹಲಿಗೆ ನುಗ್ಗಿದ್ದಾರೆ.

ಬ್ಯಾರಿಕೇಡ್ ಮುರಿದ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗಿಸಿದರೂ ಲೆಕ್ಕಿಸದ ರೈತರು ದೆಹಲಿ ಪ್ರವೇಶಿಸಿದ್ದಾರೆ. ಲಕ್ಷಾಂತರ ಟ್ರ್ಯಾಕ್ಟರ್ ಗಳು ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ದೆಹಲಿಯಲ್ಲಿ ಇಂದು ಐತಿಹಾಸಿಕ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ.

ರಾಜ್‌ ಪಾತ್‌ನಲ್ಲಿ ಅಧಿಕೃತ ಮೆರವಣಿಗೆ ಮುಗಿದ ನಂತರ ರೈತರ ಪರೇಡ್ ಆರಂಭವಾಗುತ್ತದೆ. ದೆಹಲಿಯ ಮಧ್ಯ ಭಾಗಕ್ಕೆ ರೈತರ ಪ್ರವೇಶ ಇಲ್ಲ ಎಂದು ಹೇಳಲಾಗಿದೆ. ಆದರೆ ರೈತರು ಈಗಾಗಲೇ ಗಡಿ ಭಾಗದಿಂದ ಬ್ಯಾರಿಕೇಡ್ ಮುರಿದು ಒಳಪ್ರವೇಶಿಸಿದ್ದಾರೆ.

ರೈತರನ್ನು ಹಿಮ್ಮೆಟ್ಟಿಸಲು ಪೊಲೀಸರು ಸಿಡಿಸಿರುವ ಅಶ್ರುವಾಯುವಿನ ದೃಶ್ಯವನ್ನು ಸುದ್ದಿ ಸಂಸ್ಥೆ ಎಎನ್ ಐ ಟ್ವೀಟ್ ಮಾಡಿದೆ. ಭಯಾನಕ ದೃಶ್ಯವಾಗಿ ಈ ದೃಶ್ಯ ಕಂಡು ಬಂದಿದೆ.

ಲಕ್ಷಾಂತರ ಜನರು ರೈತರ ಪರೇಡ್ ನಲ್ಲಿ ಭಾಗವಹಿಸಿದ್ದಾರೆ. ದೆಹಲಿಯಾದ್ಯಂತ ಇಂದು ರೈತರ ಘರ್ಜನೆ ಕೇಳಿ ಬಂದಿದ್ದು, ಕೃಷಿ ಕಾನೂನುಗಳ ವಿರುದ್ಧ ರೈತರು ಇಂದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಒಂದೆಡೆ ಗಣರಾಜ್ಯೋತ್ಸವ ನಡೆಯುತ್ತಿದ್ದರೆ, ಇತ್ತ ಟ್ರ್ಯಾಕ್ಟರ್ ಪರೇಡ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿವೆ.

 

Farmers’ Protest

lathicharge

 

ಇತ್ತೀಚಿನ ಸುದ್ದಿ

Exit mobile version