11:04 AM Wednesday 22 - October 2025

“ಗೋ ಕೊರೊನಾ ಗೋ” ಎಂದು ಸುದ್ದಿಯಾಗಿದ್ದ ಸಚಿವ ರಾಮ್ ದಾಸ್ ಗೆ ಕೊರೊನಾ ಪಾಸಿಟಿವ್

27/10/2020

ಮುಂಬೈ: “ಗೋ ಕೊರೊನಾ ಗೋ” ಎಂದು ಲಾಕ್ ಡೌನ್ ಸಂದರ್ಭದಲ್ಲಿ ಹೇಳಿ ದೇಶಾದ್ಯಂತ ಸುದ್ದಿ, ಟ್ರೋಲ್ ಗೀಡಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರಿಗೆ ಮಂಗಳವಾರ ಕೊರೊನಾ ಪಾಸಿಟಿವ್  ಬಂದಿದೆ.


 ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ನಾನು ವೈದ್ಯರ ಸಲಹೆ ಪಡೆದು ಆಸ್ಪತ್ರೆಗೆ ದಾಖಲಾಗಿದ್ದೇನೆ.  ನನ್ನ ಜೊತೆಗೆ ಯಾರೆಲ್ಲ ಸಂಪರ್ಕಕ್ಕೆ ಬಂದಿದ್ದಾರೋ ಅವರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಚಿವರು ಸಲಹೆ ನೀಡಿದ್ದಾರೆ.


 ನಿನ್ನೆಯಷ್ಟೇ ಬಾಲಿವುಡ್‌ ನಟಿ ಪಾಯಲ್‌ ಘೋಷ್‌ ಅವರು ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ನೇತೃತ್ವದ ರಿಪಬ್ಲಿಕನ್‌ ಪಾರ್ಟಿ ಆಪ್‌ ಇಂಡಿಯಾಗೆ ಸೇರ್ಪಡೆಯಾಗಿದ್ದರು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಯಲ್ ಘೋಷ್ ಮತ್ತು ಅಠಾವಳೆ ಜೊತೆಯಾಗಿಯೇ ನಿಂತಿದ್ದರು. ಇದೀಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೊರೊನಾ ಭೀತಿ ಎದುರಾಗಿದೆ.


ಇತ್ತೀಚಿನ ಸುದ್ದಿ

Exit mobile version