6:07 PM Wednesday 20 - August 2025

ಜ್ಞಾನವ್ಯಾಪಿ ಮಸೀದಿಯಲ್ಲಿ ಸರ್ವೇ ನಡೆಸಬೇಕೆಂಬ ಕೋರಿಕೆಯನ್ನು ತಿರಸ್ಕರಿಸಿದ ಕೋರ್ಟ್

18/12/2024

ಜ್ಞಾನವ್ಯಾಪಿ ಮಸೀದಿಯಲ್ಲಿ ಸರ್ವೇ ನಡೆಸಬೇಕೆಂಬ ಕೋರಿಕೆಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಜ್ಞಾನವ್ಯಾಪಿ ಮಸೀದಿಯ ಬಳಿ ಶಿವಲಿಂಗ ಇದೆ ಎಂದು ವಾದಿಸಿ ಹೈಕೋರ್ಟಿಗೆ ಹೊಸ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದೀಗ ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 24ಕ್ಕೆ ಮುಂದೂಡಿದೆ.

ರಾಕಿ ಸಿಂಗ್ ಎಂಬುವರು ಈ ಹೊಸ ಅರ್ಜಿಯೊಂದಿಗೆ ಅಲಹಾಬಾದ್ ಹೈಕೋರ್ಟಿನ ಬಾಗಿಲು ತಟ್ಟಿದ್ದರು. ಜ್ಞಾನವ್ಯಾಪಿ ಮಸೀದಿಯ ಬಳಿ ಸ್ವಯಂ ಭೂ ಆಗಿರುವ ಶಿವಲಿಂಗ ಇದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದರು.
ಇದೇ ವೇಳೆ ಮಸೀದಿಗಳಲ್ಲಿ ಸರ್ವೆ ನಡೆಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಪೀಠ ಈ ಆದೇಶವನ್ನು ನೀಡಿತ್ತು. ಇದರ ಬಳಿಕ ಹೈಕೋರ್ಟು ಈ ತೀರ್ಪು ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version