10:46 AM Wednesday 10 - December 2025

ಕೊವಿಡ್ ಗೆ ಮತ್ತೋರ್ವ ಬಿಜೆಪಿ ಸಚಿವ ಬಲಿ

hanuman mishra
20/04/2021

ಉತ್ತರಪ್ರದೇಶ:  ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಸಚಿವ ಹನುಮಾನ್ ಮಿಶ್ರಾ ಮಂಗಳವಾರ ಸಾವನ್ನಪ್ಪಿದ್ದು,  ಕೊವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಲಕ್ನೋನ ಸಂಜಯ್ ಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಸಂಖ್ಯೆಗಳ ಏರಿಕೆಯಲ್ಲಿ ಮಹಾರಾಷ್ಟ್ರ ನಂತರ ಸ್ಥಾನ ಉತ್ತರ ಪ್ರದೇಶ ಪಡೆದುಕೊಂಡಿದೆ. ಈ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 28,211 ಕೋವಿಡ್‍ನ ಹೊಸ ಪ್ರಕಣಗಳು ದಾಖಲಾಗಿವೆ.

ಕೊವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ವಿಫಲವಾಗಿದ್ದು, ಇಡೀ ದೇಶವೇ ಇದೀಗ ಆತಂಕದಲ್ಲಿದೆ. ಆಸ್ಪತ್ರೆಗೆ ತೆರಳಿದ ಯುವಕರು ಕೂಡ ಒಂದೇ ದಿನದಲ್ಲಿ ಹೆಣವಾಗಿ ವಾಪಸ್ ಆಗುತ್ತಿದ್ದಾರೆ. ಆಸ್ಪತ್ರೆಯೊಳಗೆ ಏನು ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವುದು ಕೂಡ ಯಾರಿಗೂ ಗೊತ್ತಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ಸುದ್ದಿ

Exit mobile version