11:54 AM Wednesday 27 - August 2025

ನಂದಿನಿ ಡೈರಿ ಬಳಿಯೇ ಬಂದು ಕರುವಿಗೆ ಹಾಲು ಕುಡಿಸಿದ ಹಸು

mudigere
25/08/2023

ಮೂಡಿಗೆರೆ.ಆ.25: ಹಸುವೊಂದು ತನ್ನ ಕರುವಿಗೆ ನಂದಿನಿ ಹಾಲಿನ ಕೇಂದ್ರದ ಮುಂಭಾಗವೇ ತನ್ನ ಕರುವಿಗೆ ಹಾಲು ಕುಡಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಮೂಡಿಗೆರೆ ಪಟ್ಟಣದ ಪ್ರವೀಣ್ ಪೂಜಾರಿ ಎಂಬುವರ ಅಂಗಡಿ ಮುಂಭಾಗವೇ ಬಂದು ಹಸು ತನ್ನ ಕರುವಿಗೆ ಹಾಲು ಕುಡಿಸಿದೆ.

ಹಸು-ಕರುವಿನ ಈ ಕ್ರಿಯೆ ನಿನ್ನೆ-ಮೊನ್ನೆಯಿಂದಲ್ಲ. ಕಳೆದ ಒಂದೂವರೆ ತಿಂಗಳಿನಿಂದಲೂ ಈ ಹಸು ಹೀಗೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಹಸು ಎಲ್ಲೇ ಇದ್ರು ಕರು ಅದರ ಜೊತೆಯೇ ಇರುತ್ತೆ. ಕರು ಹಾಲು ಕುಡಿಯಲು ಯತ್ನಿಸಿದ ಕೂಡಲೇ ಹಸು ನೇರಾ ಹಾಲಿನ ಡೈರಿವರೆಗೂ ಬಂದು ಹಾಲಿನ ಡೈರಿ ಮುಂಭಾಗದ ಕಟ್ಟೆ ಮೇಲೆಯೇ ನಿಂತು ಹಾಲು ಕುಡಿಸುತ್ತಿದೆ.

ನಿತ್ಯ ಹಸು-ಕರುವಿನ ಈ ಪ್ರೀತಿ ಕಂಡು ಸ್ಥಳಿಯರು ಕೂಡ ಆಶ್ಚರ್ಯಚಕಿತರಗಿದ್ದಾರೆ. ಈ ಹಸು ಹಲವು ವರ್ಷಗಳಿಂದ ಹಾಲಿನ ಡೈರಿ ಮುಂಭಾಗದಿಂದಲೇ ಇದೆ. ಅಂಗಡಿ ಮಾಲೀಕ ಪ್ರವೀಣ್ ಪೂಜಾರಿ ನಿತ್ಯ ಹಸುವಿಗೆ ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನ ಕೊಡುತ್ತಿದ್ದರು ಎನ್ನಲಾಗಿದೆ.

ಅಂದಿನಿಂದ ಹಸು ಈ ಅಂಗಡಿಗೆ ಶಾಶ್ವತ ಗ್ರಾಹಕರಾಗಿತ್ತು. ಕರು ಹಾಕಿದ ಮೇಲೂ ಹಸು ಅಂಗಡಿ ಬಳಿಯೇ ಇತ್ತು. ಆಗಲೂ ಪ್ರವೀಣ್ ಹಸುವಿನ ಆರೈಕೆ ಮಾಡಿದ್ದರು. ಹಾಗಾಗಿ, ಸದಾ ಅಂಗಡಿ ಮುಂಭಾಗದಲ್ಲೇ ಇರುವ ಹಸು ತನ್ನ ಕರುವಿಗೆ ಹಾಲು ಕುಡಿಸುವಾಗಲೂ ಅಂಗಡಿ ಬಳಿಯೇ ಬಂದು ಹಾಲು ಕುಡಿಸುತ್ತಿರುವುದು ವಿಶೇಷವಾಗಿದೆ.

ಇತ್ತೀಚಿನ ಸುದ್ದಿ

Exit mobile version