ಜನರ ಕಣ್ಣೆದುರೇ ನದಿಗೆ ಬಿದ್ದು ಕೊಚ್ಚಿ ಹೋದ ದನ!

chikamagalore
18/07/2024

ಚಿಕ್ಕಮಗಳೂರು: ಈ ದೃಶ್ಯ ನೋಡುದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ, ಮಲೆನಾಡ ರಣ ಮಳೆಯ ಭೀಕರತೆಗೆ ಈ ದೃಶ್ಯವೇ ಸಾಕ್ಷಿಯಾಗಿದೆ.

ಮಲೆನಾಡಲ್ಲಿ ಮಳೆಯ ರುದ್ರನರ್ತನಕ್ಕೆ ಜನರ ಜೊತೆ ಜಾನುವಾರುಗಳಿಗೂ ಉಳಿಗಾಲವಿಲ್ಲ ಎಂಬಂತಾಗಿದೆ. ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಹೋಗುತ್ತಿದ್ದ ದನವೊಂದು ನೋಡ ನೋಡುತ್ತಿದ್ದಂತೆಯೇ ನದಿಪಾಲಾಗಿರುವ ಘಟನೆ ನಡೆದಿದೆ.

ಒಂದು ದಡದಿಂದ ಮತ್ತೊಂದು ದಡಕ್ಕೆ ರಸ್ತೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದ ದನ, ರಸ್ತೆಯ ಸರಿ ಸಮಾನವಾಗಿ ಹರಿಯುತ್ತಿರುವ ನದಿಯತ್ತ ಹೆಜ್ಜೆ ಹಾಕಿದ್ದು, ದಡಕ್ಕಿಂತ ತುಸು ದೂರ ಇರುವಾಗಲೇ ನದಿಗೆ ಬಿದ್ದು ಕೊಚ್ಚಿಹೋಗಿದೆ.

ಹೆಬ್ಬಾಳೆ ಸೇತುವೆ ಮೇಲೆ 2–3 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ಯಾವುದು ರಸ್ತೆ ಯಾವುದು ನದಿ ಎಂದು ತಿಳಿದೇ ದನ ನದಿಗೆ ಬಿದ್ದು ನೀರುಪಾಲಾಗಿದೆ.

ಕಳಸ ತಾಲೂಕಿನಿಂದ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಜನರ ಕಣ್ಣೆದುರೇ ಭದ್ರೆಯ ಒಡಲಲ್ಲಿ ರಾಸು ಕೊಚ್ಚಿಕೊಂಡು ಹೋಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ

Exit mobile version