11:10 PM Friday 12 - December 2025

ಲಡ್ಡು ಮುತ್ಯಾ ಬಾಬಾನ ಟ್ರೋಲ್ ಮಾಡಿದ ಕ್ರಿಕೆಟಿಗ ಶಿಖರ್ ಧವನ್

shikhar dhavan
24/10/2024

ಬೆಂಗಳೂರು: ತಿರುಗುವ ಫ್ಯಾನ್ ಹಿಡಿದು ನಿಲ್ಲಿಸಿ ಭಕ್ತರಿಗೆ ಫ್ಯಾನ್ ನ ಧೂಳನ್ನು ಒರೆಸಿ ಪವಾಡ ಮಾಡಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಲಡ್ಡು ಮುತ್ಯಾ ಎಂಬ ಹೆಸರಿನಲ್ಲಿ ಹಾಡು ಕೂಡ ವೈರಲ್ ಆಗಿತ್ತು. ಈ ವಿಡಿಯೋವನ್ನು ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಕೂಡ ರೀಲ್ಸ್ ಮಾಡಿದ್ದಾರೆ.

ಉತ್ತರ ಕರ್ನಾಟಕದ ಪ್ರಖ್ಯಾತ ಪವಾಡ ಪುರುಷ ಲಡ್ಡು ಮುತ್ಯಾರನ್ನು ಬಿಂಬಿಸಲು ಹೊರಟಿರುವ ಆಧುನಿಕ ಲಡ್ಡು ಮುತ್ಯಾ ಬಾಬಾ ಅವರನ್ನು ಧವನ್ ಕನ್ನಡ ಹಾಡು ಬಳಸಿಯೇ ಟ್ರೋಲ್ ಮಾಡಿದ್ದಾರೆ.

ಕುರ್ಚಿ ಮೇಲೆ ಕುಳಿತಿರುವ ಶಿಖರ್ ಧವನ್ ಅವರನ್ನು ಮೂರು ಮಂದಿ ಎತ್ತಿ ಹಿಡಿದಿದ್ದಾರೆ. ಆಗ ನಿಧಾನವಾಗಿ ತಿರುಗುತ್ತಿರುವ ಫ್ಯಾನ್ ಅನ್ನು ಧವನ್ ಕೈಯಲ್ಲಿ ತಡೆದು ನಿಲ್ಲಿಸಿದ್ದಾರೆ. ಇದಾದ ಬಳಿಕ ಮೈಮೇಲೆ ಬಂದಂತ ಇಬ್ಬರು ವ್ಯಕ್ತಿಗಳಿಗೆ ಆಶೀರ್ವಾದ ಮಾಡುವಂತೆ ನಟಿಸಿದ್ದಾರೆ. ಈ ವಿಡಿಯೋಗೆ ಶಿಖರ್ ಧವನ್, ಫ್ಯಾನ್ ವಾಲೇ ಬಾಬಾ ಕಿ ಜೈ ಹೋ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ.

ಲಡ್ಡು ಮುತ್ಯಾ ಒಬ್ಬರು ಮಹಾಪುರುಷರು. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬ ತಾನೇ ಲಡ್ಡು ಮುತ್ಯಾರ ಅವತಾರ ಅಂತ ಫ್ಯಾನ್ ನಿಲ್ಲಿಸುವ ಪವಾಡ ಮಾಡುತ್ತಿದ್ದಾರೆ. ಆ ವಿಡಿಯೋ ಇದೀಗ ರಾಷ್ಟ್ರೀಯ ಮಟ್ಟಕ್ಕೆ ರೀಚ್ ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version