ಹೆಚ್ಚುತ್ತಿರುವ ನಕಲಿ ಸರ್ಕಾರಿ ಇ-ನೋಟಿಸ್ ಹಗರಣ: ಸೈಬರ್ ಕ್ರೈಮ್ ನಿಂದ ಸಾರ್ವಜನಿಕರಿಗೆ ಸೂಚನೆ

ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ಘಟಕವು ಭಾನುವಾರ ಸರ್ಕಾರಿ ಕಚೇರಿಗಳ ಹೆಸರಿನಲ್ಲಿ ತಮ್ಮ ಇಮೇಲ್ ನಲ್ಲಿ ಸ್ವೀಕರಿಸುವ ಅನುಮಾನಾಸ್ಪದ ಇ-ನೋಟಿಸ್ ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಜನರಿಗೆ ಸಲಹೆ ನೀಡಿದೆ.
ಇ-ನೋಟಿಸ್ ಗಳಲ್ಲಿ ಹೆಸರಿಸಲಾದ ಅಧಿಕಾರಿಯ ಗುರುತನ್ನು ದೃಢೀಕರಿಸಲು ಪ್ರತಿಯೊಬ್ಬರೂ ಯಾವಾಗಲೂ ಇಂಟರ್ ನೆಟ್ ಅನ್ನು ಪರಿಶೀಲಿಸಬೇಕು ಮತ್ತು ಉಲ್ಲೇಖಿಸಿದ ಇಲಾಖೆಗೆ ಕರೆ ಮಾಡಬೇಕು ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ 4 ಸಿ) ಸಾರ್ವಜನಿಕ ಜಾಹೀರಾತಿನಲ್ಲಿ ತಿಳಿಸಿದೆ.
ಸರ್ಕಾರದ ಇ-ನೋಟಿಸ್ ಗಳ ಸೋಗಿನಲ್ಲಿ “ನಕಲಿ ಇಮೇಲ್‌ಗಳನ್ನು” ಕಳುಹಿಸುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಈ ಎಚ್ಚರಿಕೆ ನೀಡಲಾಗಿದೆ.
ಜಾಹೀರಾತಿನಲ್ಲಿ ಸೈಬರ್ ಅಪರಾಧ ಘಟಕವು ಇಂತಹ ಇ-ನೋಟಿಸ್ ಗಳು ಜನರನ್ನು ಸೈಬರ್ ವಂಚನೆಯ ಬಲಿಪಶುಗಳಾಗಲು ಅವಕಾಶ ನೀಡಬಹುದು ಎಂದು ಎಚ್ಚರಿಸಿದೆ.
ಅಂತಹ ಇ-ಮೇಲ್ ಗಳಿಗೆ ಪ್ರತಿಕ್ರಿಯಿಸುವ ಮೊದಲು ಪರಿಗಣಿಸಬೇಕಾದ ಪ್ರತಿಕ್ರಮಗಳನ್ನು ಸೂಚಿಸಿದ ಇಲಾಖೆಯು “ಇಮೇಲ್ ಅಧಿಕೃತ ಸರ್ಕಾರಿ ವೆಬ್ ಸೈತ್ ನಿಂದ ಹುಟ್ಟಿಕೊಂಡಿದೆಯೇ ಎಂದು ಪರಿಶೀಲಿಸಿ. ಇಮೇಲ್‌ನಲ್ಲಿ ಹೆಸರಿಸಲಾದ ಅಧಿಕಾರಿಗಳ ಬಗ್ಗೆ ಮಾಹಿತಿಗಾಗಿ ಇಂಟರ್ ನೆಟ್ ಪರಿಶೀಲಿಸಿ ಮತ್ತು ಸ್ವೀಕರಿಸಿದ ಇಮೇಲ್ ಅನ್ನು ಪರಿಶೀಲಿಸಲು ಉಲ್ಲೇಖಿಸಿದ ಇಲಾಖೆಗೆ ಕರೆ ಮಾಡಿ ಎಂದು ಸೂಚನೆ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth