2:10 PM Wednesday 9 - September 2026

“ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ” ಎಂದು ದರ್ಶನ್ ಪ್ರಕರಣದಲ್ಲಿ ಉಮಾಪತಿ ಹೀಗೆ ಹೇಳಿದ್ದೇಕೆ?

umaparti aruna kumari darshan
13/07/2021

ಬೆಂಗಳೂರು: ನಟ ದರ್ಶನ್ ಗೆ 25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿರ್ಮಾಪಕ ಉಮಾಪತಿಯನ್ನು ಬೊಟ್ಟು ಮಾಡಲಾಗುತ್ತಿದೆ. ಈ ಬಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಉಮಾಪತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ದಡ್ಡ ಒಪ್ಪಿಕೊಳ್ತೇನೆ. ಆದರೆ 25 ಕೋಟಿ ರೂಪಾಯಿ ವ್ಯವಹಾರದಲ್ಲಿ ನೀವು ಹೇಗೆ ಯಾಮಾರಿದ್ರಿ..?ನಿಮಗೆ ಇದರ ಬಗ್ಗೆ ಅನುಮಾನ ಮೂಡಲೇ ಇಲ್ಲವಾ..? ಇಷ್ಟು ದಿನ ಕಳೆದರೂ ಮಲ್ಲೇಶ್​ ರನ್ನ ನೀವೇಕೆ ಟ್ರೇಸ್​ ಮಾಡಲಿಲ್ಲ..? ಅರುಣಾ ಕುಮಾರಿಯನ್ನ ನೀವೇಕೆ ಬಿಟ್ಟು ಕಳಿಸಿದ್ದೀರಿ..? ಎಂದು ಅವರು ದರ್ಶನ್ ಹಾಗೂ ಟೀಂನ್ನು ಪ್ರಶ್ನಿಸಿದ್ದಾರೆ.

ನನಗೆ ನಮ್ಮ ಪೊಲೀಸ್​ ಮೇಲೆ ನಂಬಿಕೆ ಇದೆ. ದರ್ಶನ್​ ಹಾಗೂ ನನ್ನ ನಡುವೆ ತಂದಿಡುವ ಕೆಲಸ ಮಾಡಲಾಗ್ತಿದೆ. ಅರುಣಾ ಕುಮಾರಿ ಹರ್ಷ ಮೆಲಂಟಾ ಜೊತೆ ಮಾತನಾಡುತ್ತಾಳೆ. ನನ್ನ ಹಾಗೂ ದರ್ಶನ್​ ಜೊತೆ ಏಕೆ ಮಾತನಾಡೋದಿಲ್ಲ..? ಬೆಂಗಳೂರು ಪೊಲೀಸರ ಮೇಲೆ ರಾಕೇಶ್​ ಪಾಪಣ್ಣಗೆ ನಂಬಿಕೆ ಇಲ್ಲವಂತೆ. ಹೀಗಾಗಿ ಮೈಸೂರಿನಲ್ಲಿ ದೂರು ನೀಡಿದ್ದಾರಂತೆ. ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ. ಇನ್ನು ಮರ್ಯಾದೆ ಉಳಿಯೋದು ಏನಿಲ್ಲ ಎಂದು ಅವರು ಹೇಳಿದರು.

ನನಗೆ ಏಪ್ರಿಲ್​ ನಿಂದಲೇ ಅರುಣಾಕುಮಾರಿಯ ಪರಿಚಯವಾಗಿತ್ತು. ಪ್ರಾಪರ್ಟಿ ವಿಚಾರವಾಗಿ ಆಕೆಯ ಪರಿಚಯವಾಗಿತ್ತು. ದರ್ಶನ್​ ಸರ್​ ಹೆಸರು ಕೇಳಿದ್ದರಿಂದ ನಾನು ಆಧಾರ್​ ಕಾರ್ಡ್ ಫೋಟೋ ಕಳಿಸಿದ್ದೆ. ನನ್ನ ಮೇಲೆ ಆರೋಪ ಬಂದಿದೆ ನಾನು ಸಾಬೀತು ಮಾಡಲೇಬೇಕು ಎಂದು ಅವರು ಹೇಳಿದರು.

ದರ್ಶನ್​ ಮಾಡಿದ ಪಾರ್ಟಿಗೆ ನನ್ನ ಕಾರನ್ನೇ ಒಳ ಹೋಗಲು ಬಿಟ್ಟಿಲ್ಲ. ಅಂದಮೇಲೆ ಲಾಕ್​ಡೌನ್​ ಸಂದರ್ಭದಲ್ಲಿ ಅರುಣಾ ಕುಮಾರಿಗೆ ಹೇಗೆ ಅನುಮತಿ ನೀಡಿದರು..? ನಾನು ಬುದ್ಧಿವಂತನಲ್ಲ.. ನಾನು ದಡ್ಡ. ಒಪ್ಪಿಕೊಳ್ತೇನೆ. ಆದರೆ ನೀವು ಬುದ್ಧಿವಂತರಲ್ವಾ ನೀವು ಹೇಗೆ ಯಾಮಾರಿದ್ರಿ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version