ಜಾತಿ ಪದ್ಧತಿ ವಿರುದ್ಧ ಸಿನಿಮಾ ಮಾಡಿದ್ದಕ್ಕೆ ದರ್ಶನ್ ಟಾರ್ಗೆಟ್ ಆದ್ರಾ?

ನಟ ದರ್ಶನ್ ಅವರ ಇತ್ತೀಚೆಗೆ ಬಿಡುಗಡೆಯಾದ ಕಾಟೇರ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಅವರ ಹಿಂದೆ ವಿವಾದಗಳು ಹುಟ್ಟಿಕೊಂಡಿದೆ. ನಿರ್ಮಾಪಕ ಉಮಾಪತಿ ವಿರುದ್ಧ ದರ್ಶನ್ ಅವರು ನೀಡಿದ ಹೇಳಿಕೆ ಇದೀಗ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.
ಉಮಾಪತಿ ಅವರನ್ನು ದರ್ಶನ್ ಅವರು ‘ತಗಡು’ ಎಂದು ಕರೆದಿದ್ದಾರೆ ಅನ್ನೋದು ಸದ್ಯದ ವಿವಾದ. ಆದ್ರೆ ಈ ವಿವಾದದ ಬೆನ್ನಲ್ಲೇ ಕೆಲವು ಸಂಘಟನೆಗಳು ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ದರ್ಶನ್ ವಿರುದ್ಧ ದೂರು ನೀಡುವುದು, ಪ್ರತಿಭಟನೆಗಳನ್ನು ಆಯೋಜಿಸುವುದು ಮೊದಲಾದ ಚಟುವಟಿಕೆಗಳನ್ನು ಆರಂಭಿಸಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಟೇರ ಚಿತ್ರದಲ್ಲಿ ಜಾತಿ ಪದ್ಧತಿಯ ಕೊಳಕನ್ನು ತೆರೆದಿಡಲಾಗಿದೆ. ಕಾಟೇರ ಚಿತ್ರದಲ್ಲಿ ಅಸ್ಪೃಷ್ಯತೆಯ ವಿರುದ್ಧ ಪ್ರಯೋಗಿಸಲಾದ ಪದಗಳು, ಜಾತಿ ಭೇದ, ಅಸ್ಪೃಷ್ಯತೆ ಆಚರಣೆಯಂತಹ ಚಟುವಟಿಕೆಗಳನ್ನು ಈಗಲೂ ಆಚರಿಸುತ್ತಿರುವ ಕೊಳಕು, ಅನಾಗರಿಕರ ಎದೆಗೆ ಚುಚ್ಚಿದಂತಾಗಿತ್ತು. ಹೀಗಾಗಿಯೇ ದರ್ಶನ್ ಮೇಲೆ ಕೆಂಡಕಾರಲು ಒಂದು ಕಾರಣ ಬೇಕಿತ್ತು. ಇದೀಗ ಉಮಾಪತಿ ಮತ್ತು ದರ್ಶನ್ ನಡುವಿನ ಶೀತಲ ಸಮರದ ಸಂದರ್ಭವನ್ನು ಬಳಕೆ ಮಾಡಿಕೊಂಡು ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬಂದಿವೆ.
ದರ್ಶನ್ ಅವರು ಉಮಾಪತಿ ಅವರ ಬಗ್ಗೆ ಮಾತ್ರವೇ ಮಾತನಾಡಿದ್ದಾರೆ. ಯಾವುದೇ ಸಮುದಾಯಗಳ ವಿರುದ್ಧ ಅವರು ಮಾತನಾಡಿಲ್ಲವಾದರೂ, ಜಾತಿ ಸಂಘಟನೆಯ ಹೆಸರಿನಲ್ಲಿ ದರ್ಶನ್ ಅವರ ವಿರುದ್ಧ ಪ್ರತಿಭಟಿಸಲು ವ್ಯವಸ್ಥಿತ ಸಂಚು ಹೂಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇನ್ನೊಂದೆಡೆ ಕಾಟೇರ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೊರಡಿಸಿದ ಉಳುವವನೇ ಹೊಲದೊಡೆಯ ಎಂಬ ಯೋಜನೆಯ ಮೂಲಕ ಬಡ ಜನರಿಗೆ ಭೂಮಿ ನೀಡಲಾಗಿತ್ತು ಎನ್ನುವ ಮಾತುಗಳು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಪ್ರಚಾರವನ್ನು ನೀಡಿರುವುದು ಸುಳ್ಳಲ್ಲ, ಈ ಎಲ್ಲ ಬೆಳವಣಿಗೆಗಳಲ್ಲಿ ಒಬ್ಬ ನಟ ಹಾಗೂ ನಿರ್ಮಾಪಕನ ನಡುವಿನ ಶೀತಲ ಸಮರವನ್ನು ರಾಜಕೀಯಗೊಳಿಸಿ, ದರ್ಶನ್ ವಿರುದ್ಧ ಮುಗಿಬೀಳಲು ಮುಂದಾಗಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth