ದೆಹಲಿ ಗಲಭೆಗೆ ಸಂಚು ಆರೋಪ: ಉಮರ್ ಖಾಲಿದ್ ಜಾಮೀನು ಕೋರಿಕೆ ತಿರಸ್ಕರಿಸಿದ ಕೋರ್ಟ್

28/05/2024

ದೆಹಲಿ ಗಲಭೆಗೆ ಸಂಚು ಹೆಣೆದ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಅವರ ಜಾಮೀನು ಕೋರಿಕೆಯನ್ನು ದೆಹಲಿಯ ಕರ್ಕರ್ದುಮ ನ್ಯಾಯಾಲಯ ತಿರಸ್ಕರಿಸಿದೆ. ಉಮರ್ ಅವರ ಜಾಮೀನು ಕೋರಿಕೆಯನ್ನು ದೆಹಲಿ ಪೋಲಿಸ್ ನ ಸ್ಪೆಷಲ್ ಪಬ್ಲಿಕ್ ಪ್ರೊಸಿಕ್ಯೂಟರ್ ತೀವ್ರವಾಗಿ ವಿರೋಧಿಸಿದರು. ಅವರಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಟರ್ ಪ್ರಬಲವಾಗಿ ವಾದಿಸಿದರು.

ದೆಹಲಿ ಪೊಲೀಸರ ಚಾರ್ಜ್ ಶೀಟ್‌ನಲ್ಲಿ ಉಮರ್ ಖಲೀದ್ ವಿರುದ್ಧ ಯಾವುದೇ ಭಯೋತ್ಪಾದಕ ಆರೋಪಗಳನ್ನು ಹೊರಿಸಲಾಗಿಲ್ಲ; ಅವರ ಹೆಸರನ್ನು ಕೇವಲ ದಾಖಲೆಯಲ್ಲಿ ಪುನರಾವರ್ತಿಸಲಾಗಿದೆ ಎಂದು ಉಮರ್ ಖಾಲಿದ್ ವಕೀಲರು ಹೇಳಿದ್ದಾರೆ. ಅವರ ಹೆಸರನ್ನು ಪುನರಾವರ್ತಿಸುವ ಮೂಲಕ, ಸುಳ್ಳು ಸತ್ಯವಾಗುವುದಿಲ್ಲ ಎಂದು ಅವರು ವಾದಿಸಿದರು.

ದೆಹಲಿ ಪೊಲೀಸರು ಉಮರ್ ಖಾಲಿದ್ 2020ರಲ್ಲಿ 23 ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಯೋಜಿಸಿದ್ದಾರೆ ಎಂದು ಆರೋಪಿಸಿದ್ದು, ಇದು ಗಲಭೆಗೆ ಕಾರಣವಾಯಿತು ಎಂದು ಹೇಳಲಾಗಿದೆ.

ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ನಿಂದ ತನ್ನ ಮನವಿಯನ್ನು ಹಿಂಪಡೆದ ನಂತರ ಉಮರ್ ಖಾಲಿದ್ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. “ಸಂದೇಶಗಳನ್ನು ಹಂಚಿಕೊಳ್ಳುವುದು ಅಪರಾಧ ಅಥವಾ ಭಯೋತ್ಪಾದಕ ಕೃತ್ಯವೇ” ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದರು.

ಕೆಲವು ಲಿಂಕ್‌ಗಳನ್ನು ಹಂಚಿಕೊಳ್ಳುವ ಮೂಲಕ ಉಮರ್ ಖಾಲಿದ್ ಪಿತೂರಿಯ ಭಾಗವಾಗಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದರು.

2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಸಂಚಿನಲ್ಲಿ ಉಮರ್ ಖಾಲಿದ್ ಗೆ ಪಾತ್ರ ಇದೆ ಎಂದು ಆರೋಪಿಸಿ 2020 ಏಪ್ರಿಲ್ 22ರಂದು ದೆಹಲಿ ಪೊಲೀಸರು ಉಮರ್ ಖಾಲಿದ್ ರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿದ್ದರು. ಆ ಬಲಿಕ ದೆಹಲಿ ಪೊಲೀಸರು ಹೆಚ್ಚುವರಿ ಆರೋಪ ಪಟ್ಟಿಯನ್ನು ದಾಖಲಿಸಿದರು. ಅದರಲ್ಲಿ ದೇಶದ್ರೋಹವೂ ಸೇರಿದಂತೆ 18 ವಿವಿಧ ಸೆಕ್ಷನ್ಗಳಲ್ಲಿ ಕೇಸು ದಾಖಲಿಸಿದರು. ಉಮರ್ ಖಾಲಿದ್ ವಿರುದ್ಧ ಹೊರಿಸಲಾದ ದೋಶಾರೋಪ ಪಟ್ಟಿಯಲ್ಲಿ ಯಾವುದೇ ಭಯೋತ್ಪಾದನಾ ಆರೋಪವನ್ನು ಹೊರಿಸಿಲ್ಲ ಎಂದು ಉಮರ್ ಖಾಲಿದ್ ಅವರ ಪರ ವಕೀಲರು ವಾದಿಸಿದರು. ಅಲ್ಲದೆ ಉಮರ ಖಾಲಿದ್ ವಿರುದ್ಧ ಅತ್ಯಂತ ಕೆಟ್ಟ ಮಾಧ್ಯಮ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಉಮರ್ ಖಾಲಿದ್ 2022 ರಲ್ಲಿ 23 ಸ್ಥಳಗಳಲ್ಲಿ ಪ್ರತಿಭಟನೆಯನ್ನು ಏರ್ಪಡಿಸಿದ್ದರು ಮತ್ತು ಈ ಪ್ರತಿಭಟನೆ ಆ ಬಳಿಕದ ಗಲಭೆಗೆ ಕಾರಣವಾಗಿತ್ತು ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version