4:36 PM Wednesday 29 - October 2025

ಬೋವಿ ಮತ್ತು ಪರಿವಾರ ನಾಯಕ್ ಜಾತಿಗಳಿಗೆ ಕಾನೂನು ಬಾಹಿರ ಜಾತಿಪ್ರಮಾಣ ಪತ್ರ ರದ್ದುಗೊಳಿಸಲು ಆಗ್ರಹ

udupi
26/08/2023

ಉಡುಪಿ: ಜಿಲ್ಲೆಯಲ್ಲಿ  ಬೋವಿ ಮತ್ತು ಪರಿವಾರ ನಾಯಕ್ ಜಾತಿಗಳಿಗೆ ಕಾನೂನುಬಾಹಿರವಾಗಿ ಪರಿಶಿಷ್ಟರ ಜಾತಿ ಪ್ರಮಾಣ ನೀಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ತಹಶೀಲ್ದಾರರುಗಳ ಮೇಲೆ ರಾಜಕೀಯ ಒತ್ತಡ ತಂದು ಜಿಲ್ಲೆಯಲ್ಲಿ ನೂರಾರು ಇಂತಹ ಅಕ್ರಮ ಜಾತಿ ದೃಢಪತ್ರಗಳನ್ನ ನೀಡಿದ್ದು ಅವುಗಳ ಮಾಹಿತಿಯನ್ನು ಸಂಘಟನೆಯು ಕಲೆಹಾಕಿದೆ.

ಇಂತಹ ಕಾನೂನುಬಾಹಿರ ಜಾತಿ ಪ್ರಮಾಣ ಪತ್ರಗಳನ್ನು ರದ್ದು ಮಾಡಬೇಕು,ಇನ್ನು ಮುಂದೆ ಜಿಲ್ಲೆಯಲ್ಲಿ ಬೋವಿ ಮತ್ತು ಪರಿವಾರ ನಾಯಕ್ ಜಾತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು.ಇದೇ ರೀತಿ ಅಕ್ರಮ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಉಡುಪಿ ಎಚ್ಚರಿಸಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್,ಜಿಲ್ಲಾ ಸಂಘಟನಾ ಸಂಚಾಲಕ ಶಾಮ್ ರಾಜ್ ಬಿರ್ತಿ,ಉಡುಪಿ ಜಿಲ್ಲಾ ಪರಿಶಿಷ್ಟ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪರಮೇಶ್ವರ ಉಪ್ಪೂರು,ದ.ಸಂ.ಸ. ಹೋರಾಟಗಾರರಾದ ಮಂಜುನಾಥ ಗಿಳಿಯಾರು,ರಮೇಶ್ ಕೆಳಾರ್ಕಳಬೆಟ್ಟು,ವಾಸುದೇವ ಮುದೂರು,ವಿಶ್ವನಾಥ ಬೆಳ್ಳಂಪಳ್ಳಿ,ಸುರೇಶ್ ಹಕ್ಲಾಡಿ ಮತ್ತು ಧನಂಜಯ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

Exit mobile version