ಪಾಕ್ ಪರ ಘೋಷಣೆ ವಿಚಾರ: ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ ಬಂಧಿತರು

ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಗೆ ಕೂಗಿರುವ ಬಿಜೆಪಿಯ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಂಧಿತರು ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ (35), ಬೆಂಗಳೂರಿನ ಜಯಮಹಲ್ನ ಮುನಾವರ್ ಅಹಮದ್ (29) ಮತ್ತು ದೆಹಲಿಯ ಕೃಷ್ಣಗಂಜ್ನ ಮೊಹಮ್ಮದ್ ಇಲ್ತಾಜ್ (31) ಬಂಧಿತರಾಗಿದ್ದು, ಪೊಲೀಸರ ವಿಚಾರಣೆ ವೇಳೆ ನಾವು ನಮ್ಮ ನಾಯಕರ ಪರ ಮಾತ್ರ ಘೋಷಣೆ ಕೂಗಿದ್ದೇವೆ, ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ನಾಸೀರ್ ಅವರ ಗೆಲುವು ಹಿನ್ನೆಲೆಯಲ್ಲಿ ನಾಸೀರ್ ಸಾಬ್ ಜಿಂದಾಬಾದ್ ಮತ್ತು ನಾಸೀರ್ ಹುಸೇನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದೆ. ಆದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ ಎಂದು ಬಂಧಿತರು ಸ್ಪಷ್ಟಪಡಿಸಿದ್ದಾರೆ.
ಅಂತಹ ದೇಶವಿರೋಧಿ ಘೋಷಣೆಗಳನ್ನು ಸ್ಥಳದಲ್ಲಿದ್ದ ಯಾರೂ ಕೂಡ ಘೋಷಣೆ ಕೂಗಿಲ್ಲ ಯಾರಾದರೂ ಅಂತಹ ಘೋಷಣೆಗಳನ್ನು ಕೂಗಿದ್ದರೆ, ಕಠಿಣ ಶಿಕ್ಷೆಯಾಗಬೇಕು ಮೊಹಮ್ಮದ್ ಶಫಿ ನಾಶಿಪುಡಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth