ಬೆಳ್ತಂಗಡಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರ, ತಪಾಸಣೆ

ಬೆಳ್ತಂಗಡಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಬೆಳ್ತಂಗಡಿ ತಾಲೂಕಿನ ಲಾಯಿಲದ ಜ್ಯೋತಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ನ ಬಗ್ಗೆ ಮಾಹಿತಿ ಶಿಬಿರ ಹಾಗೂ ತಪಾಸಣೆ ನಡೆಯಿತು.
75 ರಿಂದ ಅಧಿಕ ಸದಸ್ಯರು ಹಾಜರಿದ್ದು, ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ರಿತ ಅಬ್ರಹಾಂನವರು ಸ್ತನ ಕ್ಯಾನ್ಸರ್ ನಿಂದ ತಮಗಾದ ಅನುಭವವನ್ನು ಶಿಬಿರದಲ್ಲಿ ಹಂಚಿಕೊಂಡರು.
ಶಿಬಿರವನ್ನು ಜ್ಯೋತಿ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಸಿಸ್ಟರ್ ಆನ್ ಗ್ರೇಸ್ ಹಾಗೂ ಡಾ.ಸಾಂದ್ರ ಮೊನಿಸ್ ತಪಾಸಣೆ ನಡೆಸಿ ಸೂಕ್ತ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಜ್ಯೋತಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾಕ್ಟರ್ ಸಿಸ್ಟರ್ ಮೇರಿಲೆಟ್, ಧರ್ಮ ಭಗಿನಿಯರು ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಾಗತಿಕ ಮಹಿಳಾ ದಿನಾಚರಣೆಯ ಪ್ರಯುಕ್ತ ಶಿಬಿರದಲ್ಲಿ ನೆರೆದಿದ್ದ ಮಹಿಳೆಯರಲ್ಲಿ ಒಬ್ಬ ಹಿರಿಯ ಮಹಿಳೆಗೆ ಜ್ಯೋತಿ ಆಸ್ಪತ್ರೆಯ ವತಿಯಿಂದ ಸನ್ಮಾನ ಮಾಡಲಾಯಿತು.
ಜ್ಯೋತಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಂದ ಕೇಶದಾನ ಹಾಗೂ ರಕ್ತದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಶಿಲ್ಪಾರವರು ನಿರೂಪಿಸಿ ಧನ್ಯವಾದವಿತ್ತರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth