11:28 PM Saturday 27 - December 2025

ಡಿಕೆಶಿ ಫೋಟೋ‌ ಹರಿದು ರೈತರ ಆಕ್ರೋಶ: ಕೈ ಬಾವುಟ ಹಾಕ್ಕೊಂಡು ಪಾದಯಾತ್ರೆ ಮಾಡಕ್ಕಾಗತ್ತಾ ಎಂದು ಗುಡುಗು

chamarajanagara1
04/09/2023

ಚಾಮರಾಜನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿ ಚಾಮರಾಜನಗರದ ಜಿಲ್ಲಾಡಳಿತ ಭವನದ ಎದುರು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಈಗ ಪ್ರತಿಭಟನೆ ಮಾಡುತ್ತಿರುವವದು ಮೇಕೆದಾಟು ಪಾದಯಾತ್ರೆಗೆ ಏಕೆ ಬರಲಿಲ್ಲ..? ಎಂಬ ಡಿಕೆಶಿ ಹೇಳಿಕೆ ವಿರುದ್ಧ ಆಕ್ರೋಶಗೊಂಡ ರೈತರು, ಡಿಕೆಶಿ ಭಾವಚಿತ್ರವನ್ನು ಹರಿದುಹಾಕಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಬಾವುಟ ಹಾಕಿಕೊಂಡು, ದಮ್ಮಡಿ ಬಾರಿಸಿಕೊಂಡು ನೀವು ಮಾಡಿದರೇ ರೈತರು ಏಕೆ ಸಪೋರ್ಟ್ ಮಾಡಬೇಕು, ನೀವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹಸಿರು ಶಾಲು ಹಾಕಿಕೊಂಡು ಹೋರಾಟ ಮಾಡಿದ್ದರೇ ನಾವು ಸಪೋರ್ಟ್ ಮಾಡುತ್ತಿದ್ದೆವು, ನಾವು ಹಸಿರು ಶಾಲು ತೆಗೆದು ಕಾಂಗ್ರೆಸ್ ಬಾವುಟ ಹಾಕ್ಕೊಂಡ್ ಪಾದಯಾತ್ರೆಗೆ ಬರೋಕಾಗತ್ತಾ ಎಂದು ಪ್ರತಿಭಟನಾಕಾರರು ಗುಡುಗಿದರು.

ಮೇಕೆದಾಟು ಪಾದಯಾತ್ರೆ ಮಾಡಿದ ತಾಕತ್ ಈಗ ಇದ್ದರೆ ನೀರನ್ನು ಬಂದ್ ಮಾಡಿ ನಮ್ಮ‌ ಜೊತೆ ಹೋರಾಟಕ್ಕೆ ಬನ್ನಿ, ಅಧಿಕಾರಕ್ಕಾಗಿ ಕುರ್ಚಿ ಕೆಳಗೆ ಕೂರುವ ನಿಮ್ಮ ಮಾತು, ಗಿಳಿಪಾಠ ನಮಗೆ ಬೇಡ, ರೈತರ ವಿರುದ್ಧ ಹಗುರವಾದ ಮಾತನ್ನು ಮೊದಲು ನಿಲ್ಲಸಿ, ಕ್ಷಮೆ ಕೇಳಿ ಎಂದು ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

Exit mobile version