ಡಿಎಂಕೆ ಗೆದ್ದಿದ್ದಕ್ಕೆ ನಾಲಿಗೆ  ಕತ್ತರಿಸಿಕೊಂಡು ಹರಕೆ ತೀರಿಸಿದ ಮಹಿಳೆ!

dmk
03/05/2021

ಚೆನ್ನೈ: ತಮಿಳುನಾಡಿನಲ್ಲಿ  ದ್ರಾವಿಡ ಮುನ್ನೇಟ್ರಂ ಕಳಗಂ(ಡಿಎಂಕೆ) ಗೆದ್ದರೆ ನಾಲಿಗೆಯನ್ನು ಅರ್ಪಿಸುತ್ತೇನೆ ಎಂದು ಹರಕೆ ಹೊತ್ತಿದ್ದ ಮಹಿಳೆಯೊಬ್ಬರು, ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಹರಿಕೆ ತೀರಿಸಿದ ಭಯಾನಕ ಘಟನೆ ನಡೆದಿದೆ.

32 ವರ್ಷ ವಯಸ್ಸಿನ ವನಿತಾ ಈ ಘೋರ ಕೃತ್ಯವನ್ನು ನಡೆಸಿದವರಾಗಿದ್ದಾರೆ.  ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ವನಿತಾ ಹರಕೆಯನ್ನು ಸಲ್ಲಿಸಿದ್ದಾರೆ.

ಇಲ್ಲಿನ ಮುಥಾಲಮ್ಮನ ದೈವಸ್ಥಾನಕ್ಕೆ ವನಿತಾ ತೆರಳಿದ್ದಾರೆ. ಆದರೆ ಕೊವಿಡ್ 19 ಹಿನ್ನೆಲೆಯಲ್ಲಿ ದೈವಸ್ಥಾನವನ್ನು ಮುಚ್ಚಲಾಗಿತ್ತು. ಹೀಗಾಗಿ ದೈವ ಸ್ಥಾನದ ಬಾಗಿಲಿನ ಬಳಿಯ ಗೇಟ್ ಬಳಿಯಲ್ಲಿ ತನ್ನ ನಾಲಿಗೆ ಕತ್ತರಿಸಿ ಇಟ್ಟಿದ್ದ ವನಿತಾ ಪ್ರಜ್ಞೆತಪ್ಪಿ ಬಿದ್ದಿದ್ದರು.  ಈ ವೇಳೆ ಸ್ಥಳದಲ್ಲಿದ್ದವರು ಮಹಿಳೆಯನ್ನು ಗಮನಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version