ಓಯ್ ಸಂಪಾದಕರೆ ಮಂಡೆ ಸರಿ ಉಂಟಾ ಮರ್ರೆ!: ಪ್ರಕಾಶ್ ರಾಜ್ ಮಾಡಿದ ಟ್ವೀಟ್ ನ ಅರ್ಥ ನಿಮ್ಗೆ ಗೊತ್ತಾ?

ನಟ ಪ್ರಕಾಶ್ ರಾಜ್ ಅವರು ಚಂದ್ರಯಾನ—3 ಬಗ್ಗೆ ಅವಹೇಳನಾಕಾರಿ ಟ್ವೀಟ್ ಮಾಡಿದ್ದಾರೆ ಅಂತ ದೃಶ್ಯ ಮಾಧ್ಯಮಗಳು ಬೊಬ್ಬಿಟ್ಟಿದ್ದೇ ಬಿಬ್ಬಿಟ್ಟಿದ್ದು, ಅಷ್ಟಕ್ಕೂ ಪ್ರಕಾಶ್ ರಾಜ್ ಮಾಡಿದ ಟ್ವೀಟ್ ನ ಅರ್ಥ ಏನು ಅನ್ನೋದು ಮಾಧ್ಯಮಗಳಿಗೆ ಅರ್ಥವಾಗಿಲ್ಲ ಅನ್ನೋದು ಮಾತ್ರ ವಾಸ್ತವ.
ಕೇರಳದಲ್ಲಿ ಕಾಕಾ ಟೀ ಅಂದ್ರೆ ಬಹಳ ಫೇಮಸ್. ಜಗತ್ತಿನ ಯಾವ ಮೂಲೆಯಲ್ಲಿ ಹೋಗಿ ನೋಡಿದ್ರು, ಕೇರಳದ ಕಾಕಾನ ಚಾಯ್ ಅಂಗಡಿ ಸಿಗುತ್ತದೆ. ಅಲ್ಲದೇ ಕೇರಳದಲ್ಲಿ ಕಾಕಾನ ಅಂಗಡಿಯ ಟೀ ಇಲ್ಲದೇ ದಿನವೇ ಆರಂಭವಾಗಲ್ಲ ಅನ್ನೋ ಮಾತುಗಳು ಕೂಡ ಪ್ರಚಲಿತದಲ್ಲಿದೆ. ಈ ವ್ಯಂಗ್ಯಾರ್ಥವನ್ನ ಹೋಲುವ ಟ್ವೀಟ್ ನ್ನ ಪ್ರಕಾಶ್ ರಾಜ್ ಮಾಡಿದ್ದಾರೆ.
ಚಂದ್ರಯಾನ ಚಂದ್ರನ ಮೇಲೆ ತಲುಪುವ ಮೊದ್ಲೇ ಕೇರಳದ ಕಾಕಾ ತನ್ನ ಟೀ ಅಂಗಡಿಯನ್ನ ಚಂದ್ರನ ಮೇಲೆ ತೆರೆದಿದ್ದಾನೆ ಅನ್ನೋ ತಮಾಷೆಯ ವಿಡಿಯೋವನ್ನ ಪ್ರಕಾಶ್ ರಾಜ್ ಹಂಚಿಕೊಂಡಿದ್ದಾರೆ. ಆದ್ರೆ ಇದರ ತಲೆ ಬುಡ ಗೊತ್ತಿಲ್ಲದ ಕೆಲವು ಮಾಧ್ಯಮಗಳು, ಪ್ರಕಾಶ್ ರಾಜ್ ಮೇಲಿನ ಹಳೆಯ ದ್ವೇಷ ಎಲ್ಲವನ್ನೂ ಸೇರಿಸಿ, ಇನ್ನೇನೋ ದೇಶ ದ್ರೋಹಿ ಅಂತ ಬಿಂಬಿಸಲು ಸಿದ್ಧವಾಗಿ ಬಿಟ್ಟಿರೋದು ಮಾತ್ರ ದುರಂತವಾಗಿದೆ.
ಮಾಧ್ಯಮಗಳು ದ್ವೇಷ ಹರಡುತ್ತಿವೆ ಅನ್ನೋ ಭಾವನೆ ಜನರಲ್ಲಿ ಗಟ್ಟಿಯಾಗಿ ಬೆಳೆದಿದೆ. ದ್ವೇಷ ಹರಡುತ್ತಿರೋ ಭರದಲ್ಲಿ ತಮಾಷೆ ಮಾಡುವುದನ್ನ ಮರೆತಂತಿದೆ, ಸಾಮಾನ್ಯವಾಗಿ ತಮಾಷೆಯಲ್ಲಿ ನಗು ಹುಟ್ಟುತ್ತದೆ. ಆದ್ರೆ… ಈಗ ಅದರಲ್ಲೂ ದ್ವೇಷ ಹುಟ್ಟುವಂತಾಗಿದೆ.
“ಯಾರ್ರಿ… ಚಾಯ್.. ಚಾಯ್ … ಚಾಯ್… ಎಸಿ ರೂಮ್ ನಲ್ಲಿ ಮಂಡೆ ಬಿಸಿ ಮಾಡ್ಕೊಂಡು ಕುಳಿತಿರೋ ಸಂಪಾದಕರಿಗೊಂದು ಕಾಕಾನ ಅಂಗಡಿಯ ಖಡಕ್ ಚೂಡ್(ಬಿಸಿ) ಚಾಯ್ ಕೊಡ್ರಪ್ಪ…”