ಬಿಜೆಪಿ ಜೊತೆ ಜೆಡಿಎಸ್ ಸೇರ್ತಿರೋದ್ರ ಹಿಂದಿನ ಕಾರಣ ಗೊತ್ತಾ?

ವಿಶೇಷ ವರದಿ: ಸಂಧ್ಯಾ ಸೊರಬ
ರಾಜ್ಯ ರಾಜಕೀಯದಲ್ಲಿ ಸದ್ಯ ಜೆಡಿಎಸ್-ಬಿಜೆಪಿ ಮೈತ್ರಿಯದ್ದೇ ಸುದ್ದಿ. ಈ ವಿಚಾರವನ್ನು ಬಿಜೆಪಿಯ ಕೆಲ ನಾಯಕರು ಹಾಗೂ ಜೆಡಿಎಸ್‌ನ ದೊಡ್ಡಗೌಡರು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಇಷ್ಟು ದಿನ ಇಲ್ಲ ಇಲ್ಲ ಅಂತ ಹೇಳ್ತಾಹೇಳ್ತಾನೇ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಈಗ ಕೆಲವು ದಿನಗಳ ಮೊದಲೇ ಹುಂ ಅಂದಿದ್ದಾರೆ. ಅರ್ಥಾತ್ ಬಿಜೆಪಿಯ ಜೊತೆ ಜೆಡಿಎಸ್ ಸೇರ್ತಿರೋದನ್ನ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಆದ್ರೆ ಇದನ್ನ ಸದ್ಯ ಮೈತ್ರಿಯೋ ಒಪ್ಪಂದವೋ ಇನ್ನ ವಿಲೀನವೋ ಯಾವುದೂ ಅನ್ನೋದ್ರ ಸ್ಪಷ್ಟತೆ ಇಲ್ಲ. ಅದೊಂದು ಕಡೆಯಾದ್ರೆ ಇಷ್ಟು ದಿನಗಳ ಕಾಲ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲ ರಾಜ್ಯಗಳಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಬಲವಾಗಿ ಕಟ್ಟುವ ದೇವೇಗೌಡರ ವಯೋವಯಸಿನಾಸೆಗೂ ಹೆಚ್.ಡಿ.ಕುಮಾರಸ್ವಾಮಿಯ ತನ್ನ ಪಕ್ಷವೆಂಬ ಆಶಯಕ್ಕೂ ಸದ್ಯ ತಣ್ಣೀರು ಬಿದ್ದಂಗಾಗಿದೆ.
ಇಂತಹ ಸ್ಥಿತಿ ಬದಲಾದ ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ಬಂದೊದಗಿದೆ. ಅಷ್ಟಕ್ಕೂ ಜೆಡಿಎಸ್ ನ್ನ ಬಿಜೆಪಿ ಜೊತೆಗೆ ಸಖ್ಯ ಮಾಡೋದು ಇಂದು ನಿನ್ನೆಯ ಯೋಚನೆಯಂತೂ ಖಂಡಿತ ಅಲ್ಲವೇ ಅಲ್ಲ ಎನ್ನುತ್ತಾವೆ ಬಲ್ಲ ಮೂಲಗಳು.
ಹೀಗೆ ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಪೂರ್ವದ ಸ್ಥಿತಿಯತ್ತ ಕಣ್ಣುಹಾಯಿಸಿ ಹಿಂದೆ ಹೋಗೋದಾದ್ರೆ , ರಾಜಕೀಯ ಮಾಂತ್ರಿಕ ಎಂದೇ ಕರೆಯಲ್ಪಟ್ಟಿದ್ದ ಆಗ ಹೆಸರೂ ಮಾಡಿದ್ದ ಪ್ರಶಾಂತ್ ಕಿಶೋರ್ ನ ತೆನೆಹೊತ್ತ ನಾಯಕರು ಭೇಟಿಯಾಗಿದ್ರು. ತೆನೆ ಹೊತ್ತ ಮಹಿಳೆ ರಾಜ್ಯಾದ್ಯಂತ ಬಲಿಷ್ಠಾಗೋಕೆ ಪ್ಲ್ಯಾನ್ ಕೊಡಿ ಅಂದಾಗ ಪ್ರಶಾಂತ್ ಕಿಶೋರ್ ಹೇಳಿದ್ದೊಂದೇ “ಯಾವುದಾದ್ರೂ ರಾಷ್ಟ್ರೀಯ ಪಕ್ಷಗಳ ಜೊತೆ ಸಖ್ಯನೋ ಮೈತ್ರಿನೋ ಅಥವಾ ನಿಮ್ಮ ತೆನೆಹೊತ್ತ ಮಹಿಳೆಯನ್ನ ವಿಲೀನ ಮಾಡ್ಲೇಬೇಕು. ಸ್ವಂತ ಬಲದ ಮೇಲೆ ಬರೋದು ಕಷ್ಟ ಅಂತಾ. ಹೇಗೂ ಅತಂತ್ರ ಫಲಿತಾಂಶ ಬಂದ್ರೆ ಜೆಡಿಎಸ್ ಬೇಕೇಬೇಕು ಆಟ ಆಡಬಹುದಂತ. ಬಹುತೇಕ ಅದು ಕಮಲದ ಜೊತೆಗಿನ ನಿರೀಕ್ಷೆಯೇ ಇತ್ತು. ಇಷ್ಟೊಂದು ದೊಡ್ಡಮಟ್ಟದಲ್ಲಿ ಹಸ್ತ ರಾಜ್ಯಾದ್ಯಂತ ಚಾಚುತ್ತೆ ಅನ್ನೋದೂ ಹೆಚ್ ಡಿಕೆಗೆ ಗೊತ್ತಿರ್ಲಿಲ್ಲ. ಅಪ್ಪಮಕ್ಕಳ ಪಕ್ಷವೆಂದಷ್ಟೇ ಗುರುತಿಸಿಕೊಂಡಿರೋ ಪಕ್ಷ ಅನ್ನೋ ಹಣೆಪಟ್ಟಿಯಿಂದ ಹೊರಬರೋಹಂಗೆ ಮೇಲ್ನೋಟಕ್ಕಾದ್ರೂ ಸಕ್ಸಸ್ ಮೇಲ್ನೋಟದ ಪದರ ಹಂಗೆ ಕಾಣ್ತಷ್ಟೇ. ಬಂದವರು ಬಾರದವರಾದ್ರೂ ಬಾರದವರೂ ಬಂದವರಾದ್ರೂ ಪದ್ಮನಾಭನಗರದ ರಾಜಕೀಯದಲ್ಲಿ.
ಅದಾಗ್ಲೇ ಕಾಂಗ್ರೆಸ್ ಜೊತೆ ಕಳೆದ ಬಾರಿ ಕೈಸುಟ್ಟು ಕೊಂಡ ಅನುಭವ ಬೇರೆ. ರಾಮನಗರದಿಂದ ರಾಜಕೀಯ ಪುನರ್ಜನ್ಮ ಪಡೆದಿದ್ದ ಹೆಚ್ಡಿಕೆ ಮಗನನ್ನ ಅದೇ ಕ್ಷೇತ್ರದಿಂದ ಯಶಸ್ಸು ಸಿಗಬಹುದಂತ ಹರಕೆ ದೇವರಪೂಜೆ ಎಲ್ಲವನ್ನೂ ಮಾಡಿದ್ರು. ಸಂಸದನಾಗದ ಮಗ ಶಾಸಕನಾದ್ರೂ ಆಗಲೀ ಅನ್ನೋ ಅನಿತಾ ಕುಮಾರಸ್ವಾಮಿಯ ಕನಸು ಕನಸಾಗೇಉಳಿತು. ರಾಜ್ಯ ರಾಜಕಾರಣದಿಂದ ದೂರಸರಿದಂತೆ ಕೇಂದ್ರಕ್ಕೆ ಹತ್ತಿರವಾಗೋ ಚಿಂತನೆಯಲ್ಲಿ ರಾಜ್ಯಸಭೆಗೆ ದೊಡ್ಡಗೌಡ್ರೂ ಹೋದ್ರು. ಕೆಲವು ತಿಂಗಳ ಹಿಂದೆ ಪ್ರಧಾನಿ ಮೋದಿನ್ನ ಭೇಟಿಯಾದ್ರು. ಮೇಲ್ನೋಟಕ್ಕೆ ಕರ್ಟಸಿ ವಿಸಿಟ್ ಅಂತಾದ್ರೂ ಒಳಗಿದ್ದ ರಾಜಕೀಯ ಮರ್ಮವೇ ಬೇರೆಯಾಗಿತ್ತು.
ಈಗ ಅದಕ್ಕೆಲ್ಲ ಸದ್ಯದ ಪರಿಸ್ಥಿತಿಯಲ್ಲಿ ಕಾಲ ಅನಿವಾರ್ಯವೋ ಅವಶ್ಯಕತೆಯೋ ಒಟ್ಟು ಕೂಡಿ ಬಂದಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ತೆನೆಹೊತ್ತಮಹಿಳೆಗೆ ಕಮಲ ಬೇಕಾಗಿದೆ. ರಾಜಕೀಯ ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದೂ ಮತ್ತೆ ಗೋಚರಿಸುತ್ತಿದೆ. ಅದಕ್ಕೆ ಬಿಜೆಪಿ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷನಾಯಕನನ್ನೂ ಇನ್ನೂ ಗುರುತಿಸಿರಲಿಲ್ಲ. ಸ್ವಲ್ಪ ಹೆಚ್ಚುಕಡಿಮೆ ವಿಪಕ್ಷನಾಯಕನ ಕೆಲಸವನ್ನು ಮಾತುಗಳ ಚಾಟಿಯಿಂದಲೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಬೀಸಲು ಅಧಿವೇಶನದಲ್ಲಿ ಬಹಳ ದಿನಗಳ ಬಳಿಕ ಈ ಬಾರಿ ಹೆಚ್ ಡಿಕೆ ಬಹುತೇಕ ಹಾಜರಿದ್ದಿದ್ದು ಗಮನಾರ್ಹ. ಬೊಮ್ಮಾಯಿಗಿಂತಲೂ ಹೆಚ್ಚಾಗೇ ಸರ್ಕಾರದ ವಿರುದ್ಧ ಅಂದರೆ ಕಾಂಗ್ರೆಸ್ ವಿರುದ್ಧದಲೋಪಗಳನ್ನು ರಾಜಕೀಯವಾಗಿ ಪ್ರತಿದಿನಒಂದಲ್ಲಒಂದು ರೀತಿಯಲ್ಲಿ ಎತ್ತಿ ಹಿಡಿಯುತ್ತಿರುವುದು.
ಜೆಡಿಎಸ್ ಈಗ ಮೊದಲಿನಂತಿಲ್ಲ.ಇದ್ದಿದ್ದ ಹಳೇ ಮೈಸೂರು ಭಾಗದಲ್ಲಿಯೂ ತೆನೆಹೊತ್ತ ಮಹಿಳೆ ತನ್ನ ಛಾಪು ಕಳೆದುಕೊಂಡಿದೆ. ಇನ್ನೂ ತೀರಾ ಇದ್ದೂ ಇಲ್ಲದಂತಾಗಿದೆ. ಅತಂತ್ರ ಸೃಷ್ಟಿಸಲಾಗದಷ್ಟೂ ಅಂತ ಗೊತ್ತಾಗಿದ್ದೇ ಈ ಚುನಾವಣೆಯಲ್ಲಿ. ಇನ್ನೊಂದು ಪಕ್ಷದ ಜೊತೆಗೂಡೇ ಹೆಚ್ ಡಿಕೆ ಸಿಎಂ ಇಲ್ಲಿಯವರೆಗೆ ಆಗಿದ್ದಾರೆಯೇ ಹೊರತು ಪೂರ್ಣ ಪ್ರಮಾಣದ ಜೆಡಿಎಸ್ ನ ಬಹುಮತದಿಂದಲ್ಲ. ಪ್ರಶಾಂತ್ ಕಿಶೋರ್ ನ ಮಾತು ಸಲಹೆ ಪಾಲಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೊನೆ ಪಕ್ಷ ರಾಜಕೀಯದಲ್ಲಿ ಮೂರನೇ ತಲೆಮಾರಾದರೂ ಇರಬೇಕೆಂಬ ಉದ್ದೇಶವೂ ಬಿಜೆಪಿ ಜೊತೆ ಹೋಗುವಂತೆ ಮಾಡಿದೆ.