9 ವರ್ಷದ ಹುಡುಗಿಯನ್ನ ತೆಗೆದುಕೊಂಡು ಹೋಗಿ ಆಸ್ತಿ ಬರೆಸಿದ್ದಕ್ಕೆ ನಿಮ್ಮ ಕೈ ಬಲಪಡಿಸಬೇಕೇ?: ಡಿಕೆಶಿ ವಿರುದ್ಧ ದೇವೇಗೌಡ ಗಂಭೀರ ಆರೋಪ

ಚಿಕ್ಕಮಗಳೂರು: ನನ್ನ ಕೈ ಬಲಪಡಿಸಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿರುಗೇಟು ನೀಡಿದ್ದು, ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದಾರೆ.
ಅವರನ್ನ ಬಲಪಡಿಸಬೇಕೇ…ಏಕೆ…? 9 ವರ್ಷದ ಹುಡುಗಿಯನ್ನ ತೆಗೆದುಕೊಂಡು ಹೋಗಿ ಆಸ್ತಿ ಬರೆಸಿದ್ರಲ್ಲಾ ಅದಕ್ಕಾ? ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.
ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ, ಅವರು(ಡಿ.ಕೆ.ಶಿವಕುಮಾರ್) ಒಂದು ಐಟಿಯನ್ನ ಸ್ಥಾಪನೆ ಮಾಡಿದರು. ಅದರ ಹಿಂದಿನ ದಿನ ಅಮೆರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿಯನ್ನು ಇವರು ಒಂದು ಸುಳ್ಳು ಕ್ರಯ ಪತ್ರ ಸ್ಥಾಪನೆ ಮಾಡುತ್ತಾರೆ. ಹೈಕೋರ್ಟ್, ಸುಪ್ರೀಂಕೋರ್ಟ್ ಗೆ ಹೋದ್ರು ಇವರಿಗೆ ಮುಖಭಂಗ ಆಯ್ತು. ಆಮೇಲೆ ಅವರ 9 ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇಡ್ತಾರೆ. ನಿನ್ನ ಮಗಳು ಬೇಕು ಅಂದ್ರು ಸಹಿ ಮಾಡು ಎನ್ನುತ್ತಾರೆ.
ಆ ತಾಯಿ ಎಲ್ಲಾ ಬರೆದುಕೊಡು ನನ್ನ ಮಗಳ ಕರೆದುಕೊಂಡು ಬಾರಪ್ಪಾ ಅಂತ ಗಂಡನ ಕಾಲು ಹಿಡಿಯುತ್ತಾಳೆ. ಹೋದಾಗ, ಆ ಮಗುನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಒಳಗೆ ತೆಗೆದುಕೊಂಡು ಹೋಗ್ತಾರೆ, ನನ್ನ ಮುಂದೆ ದಾಖಲೆ ಇದೆ. ಇದನ್ನ ಎಲೆಕ್ಷನ್ ನಲ್ಲಿ ಬಳಸಿ ಅಂತಾ ಲಾಯರ್ ತಂದು ಕೊಟ್ರು ಎಂದು ದೇವೇಗೌಡರು ಹೇಳಿದರು.
ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ, ನಾನು ಓಟರ್ ಲೀಸ್ಟ್ ನಲ್ಲಿ ಇಲ್ಲ… ಈ ಕರ್ನಾಟಕ ಸಾಕು ಅಂತಾರೆ. ಅವರ ಹೆಸರು ನನಗೆ ಮರೆತೋಗಿದೆ, ಬಹಳ ವರ್ಷ ಆಯ್ತು, ಆಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡ್ತಾರೆ. ಇವರು ಚೆಕ್ ಕೊಡ್ತಾರೆ 16, 4 ಲಕ್ಷಕ್ಕೆ ಎರಡೂ ಲ್ಯಾಪ್ಸ್ ಆಗುತ್ತೆ, ಇದನ್ನ ಹೊರಗೆ ಹೇಳುದ್ರೆ ಏನಾಗುತ್ತೆ ಗೊತ್ತಾ ಅಂತ ಕಬ್ಬನ್ ಪಾರ್ಕ್ ನಲ್ಲಿ ಆ ವ್ಯಕ್ತಿಯನ್ನು ಹೆದರಿಸ್ತಾರೆ ಎಂದು ದೇವೇಗೌಡರು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೋ ನೋಡಿ:
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth