ಮೊಬೈಲ್ ಲೈಟ್ ಮೂಲಕ ಸಿಜೇರಿಯನ್: ಗರ್ಭೀಣಿ, ಮಗುವನ್ನು ಕೊಂದ ವೈದ್ಯರು..!

03/05/2024

ಮೊಬೈಲ್ ಫೋನಿನ ಟಾರ್ಚ್ ಉಪಯೋಗಿಸಿ ಸಿಜೇರಿಯನ್ ನಡೆಸಲಾದ ಘಟನೆ ಮುಂಬೈಯಲ್ಲಿ ನಡೆದಿದ್ದು ಗರ್ಭಿಣಿ ಮಹಿಳೆ ಮತ್ತು ಮಗು ಮೃತಪಟ್ಟಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ಈ ದಾರುಣ ಘಟನೆ ನಡೆದಿದೆ.

ವಿಶೇಷ ಚೇತನ ವ್ಯಕ್ತಿಯಾಗಿರುವ ಕುಶ್ರುದ್ದೀನ್ ಅವರ 26 ವರ್ಷದ ಪತ್ನಿಯನ್ನು ಸುಷ್ಮಾ ಸ್ವರಾಜ್ ಮೆಟರ್ನಿಟಿ ಹೋಮ್ ಗೆ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಹೀಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಮೂರು ಗಂಟೆಗಳೇ ಆದರೂ ಜನರೇಟರ್ ಓನ್ ಮಾಡಿರಲಿಲ್ಲ ಎಂದು ಕುಟುಂಬ ಆರೋಪಿಸಿದೆ.. ಈ ತಾಯಿ ಮತ್ತು ಮಗು ಮೃತಪಟ್ಟ ಬಳಿಕ ವಿದ್ಯುತ್ತಿನ ನೆರವಿಲ್ಲದೆ ಇನ್ನೊಂದು ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಕುಟುಂಬ ಹೇಳಿದೆ. ಈ ಕುಟುಂಬ ಕೆಲವು ದಿನಗಳಿಂದ ಆಸ್ಪತ್ರೆಯ ಹೊರಗೆ ಪ್ರತಿಭಟಿಸುತ್ತಿದೆ. ಇದೀಗ ಬ್ರಹನ್ ಮುಂಬೈ ಮುನಿಸಿಪಾಲಿಟಿ ಕಾರ್ಪೊರೇಷನ್ ತನಿಖೆಗಾಗಿ ಆದೇಶ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version