10:05 PM Saturday 8 - November 2025

ಗೃಹಬಳಕೆ ಎಲ್‍ ಪಿಜಿ ಸಿಲಿಂಡರ್ ದರ ಇಳಿಕೆ:  ನಳಿನ್‍ ಕುಮಾರ್ ಕಟೀಲ್ ಅಭಿನಂದನೆ

nalinkumar kateel
29/08/2023

ಬೆಂಗಳೂರು: ಗೃಹಬಳಕೆಯ 14 ಕೆಜಿ ಎಲ್‍ ಪಿಜಿ ಸಿಲಿಂಡರ್ ದರವನ್ನು 200 ರೂಪಾಯಿ ಇಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಸ್ವಾಗತಿಸಿದ್ದಾರೆ.

ಈ ನಿರ್ಧಾರದಿಂದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ ಎಂದಿರುವ ಅವರು, ಈ ಕುರಿತು ನಿರ್ಧರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಮತ್ತು ಕೇಂದ್ರದ ಬಿಜೆಪಿ ಸರಕಾರಕ್ಕೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಈಗಾಗಲೇ 200 ರೂ. ನೆರವು ಲಭಿಸುತ್ತಿದ್ದು, ಈಗ 400 ರೂ. ಬೆಲೆ ಇಳಿಕೆ ಆಗಲಿದೆ. ಅಲ್ಲದೆ ಹೊಸದಾಗಿ 75 ಲಕ್ಷ ಉಜ್ವಲ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡುವ ಕ್ರಮ ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ. ಹೊಗೆರಹಿತ ಅಡುಗೆ ಸಂಬಂಧ ಕೇಂದ್ರದ ಕ್ರಮ ಅತ್ಯಂತ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version