ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನ

ಚಾಮರಾಜನಗರ: ಡಾ.ರಾಜ್ ಕುಮಾರ್ ಅವರ ಸಹೋದರಿ, ಪುನೀತ್ ರಾಜ್ ಕುಮಾರ್ ಅವರ ಅತ್ತೆ ನಾಗಮ್ಮ ಅವರು ವಯೋ ಸಹಜ ಕಾಯಿಲೆಯಿಂದ ಇಂದು ನಿಧನರಾಗಿದ್ದಾರೆ.
ಅವರಿಗೆ 92 ವರ್ಷ ವಯಸ್ಸಾಗಿತ್ತು. ರಾಜ್ ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ಇಂದು ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ಅವರು ಮೃತಪಟ್ಟಿದ್ದಾರೆ.
ಕಂದ ನೋಡ್ಕೊಂಡು ಹೋಗು ಎಂದಿದ್ದ ನಾಗಮ್ಮ:
ಡಾಕ್ಟರ್ ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರಿಗೆ ಅಪ್ಪು ನಿಧನದ ವಿಷಯವೇ ಗೊತ್ತಿರಲಿಲ್ಲ, ಅಪ್ಪು ನಿಧನರಾಗಿ ವರ್ಷಗಳೇ ಕಳೆದು ಹೋದರೂ ಅತ್ತೆ ನಾಗಮ್ಮ ಅವರಿಗೆ ಪುನೀತ್ ತೀರಿ ಹೋಗಿರೋ ವಿಷಯ ಗೊತ್ತಿಲ್ಲ. ಅತ್ತೆ ನಾಗಮ್ಮ ಆಗಾಗ “ಅಪ್ಪು ಕಂದ ಬಂದು ನನ್ ನೋಡ್ಕೊಂಡು ಹೋಗು” ಎಂದು ಹೇಳುತ್ತಿದ್ದರು.
ವಯಸ್ಸಾಗಿರೋ ನಾಗಮ್ಮ ಅವರಿಗೆ ಮನೆಯರು ಏನೂ ಹೇಳಿಯೇ ಇಲ್ಲ. ಅಪ್ಪು ನಿಧನರಾಗಿರೋ ವಿಷಯವನ್ನೂ ತಿಳಿಸೋಕೆ ಹೋಗಿಯೇ ಇಲ್ಲ. ಹಾಗಾಗಿಯೆ ನಾಗಮ್ಮ ಅವರು ಅಪ್ಪು ಬರ್ತಾನೆ. ಬಂದು ನೋಡಿಕೊಂಡು ಹೋಗ್ತಾನೆ ಅನ್ನುವ ನಂಬಿಕೆಯಲ್ಲಿಯೇ ಇದ್ದರು. ಇದೀಗ ಅವರೂ ಕೊನೆಯುಸಿರೆಳೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD