ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಮಹಿಳೆಯರ ರಂಪಾಟ: ಪೊಲೀಸರನ್ನೇ ನಿಂದಿಸಿ‌ ಗಲಾಟೆ

10/05/2024

ಮದ್ಯದ ಅಮಲಿನಲ್ಲಿ ಬೀದಿಯಲ್ಲಿ ಗಲಾಟೆ ಮಾಡಿದ ಮೂವರು ಮಹಿಳೆಯರ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯು ರಾಜ್ಯದ ವಿರಾರ್ ನಗರದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಪೊಲೀಸರ ಪ್ರಕಾರ, ಮಹಿಳೆಯರು ಹತ್ತಿರದ ಬಾರ್ ನಿಂದ ಹೊರಬಂದ ನಂತರ ಗಲಾಟೆ ಮಾಡಿದ್ದಾರೆ.
ಸ್ಥಳೀಯರಿಂದ ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

ಈ ವೀಡಿಯೊದಲ್ಲಿ ಮಹಿಳೆಯರು ಪೊಲೀಸ್ ಅಧಿಕಾರಿಗಳನ್ನು ಕೆಟ್ಟದಾಗಿ ವರ್ತಿಸುವುದು ಮತ್ತು ನಿಂದಿಸುವುದನ್ನು ಕಾಣಬಹುದು. ಇದೇ ವೇಳೆ ಮಹಿಳಾ ಪೊಲೀಸ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು.
ಈ ಮಹಿಳೆಯರಲ್ಲಿ ಓರ್ವೆ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಚ್ಚಿರುವುದು ಈ ವೀಡಿಯೊದಲ್ಲಿ ಕಾಣಬಹುದು. ನಂತರ, ಈ ಮಹಿಳೆಯರನ್ನು ಮನೆಗೆ ಕಳುಹಿಸಲಾಯಿತು. ಈ ಕುರಿತು ತನಿಖೆ ನಡೆಯುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version