4:37 AM Thursday 29 - January 2026

ಈ ಬಾರಿ ಬೇಸಿಗೆ ರಜೆ ಇದೆಯೇ? ಶಿಕ್ಷಣ ಸಚಿವರು ಏನು ಹೇಳಿದರು ಗೊತ್ತಾ?

09/02/2021

ಬೆಳಗಾವಿ: ಈ ಬಾರಿ ಬೇಸಿಗೆ ರಜೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದು, ಕಳೆದ ವರ್ಷ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಶಾಲಾ ವಾರ್ಷಿಕ ಅವಧಿಯಲ್ಲಿ ಕಡಿತವಾಗಿದ್ದು, ಇದನ್ನು ಸರಿದೂಗಿದಲು ಈ ಬಾರಿ ಬೇಸಿಗೆ ರಜೆ ಕಡಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಇಂದು ಖಾನಾಪುರದ ಶಾಲೆಗೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಕಳೆದುಹೋದ ಸಮಯವನ್ನು ಸರಿದೂಗಿಸಲು ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿಳಂಬವಾಗುವುದನ್ನು ತಡೆಯಲು, ಶಿಕ್ಷಣ ಇಲಾಖೆಯು ರಜಾದಿನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಯೋಜನೆಯನ್ನು ರೂಪಿಸುತ್ತಿದೆ ಎಂದು ತಿಳಿಸಿದರು.

ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಕಾಲಕ್ಕೆ ಶಾಲಾ, ಕಾಲೇಜು ಪ್ರಾರಂಭ ಮಾಡದೆ ಇರುವುದರಿಂದ ಶಿಕ್ಷಣದಿಂದ ಮಕ್ಕಳು ದೂರ ಸರಿಯುತ್ತಿದ್ದಾರೆ. ಅಲ್ಲದೆ ಬಾಲ್ಯ ವಿವಾಹದ ಸಂಖ್ಯೆಯು ಹೆಚ್ಚಳವಾಗಿದೆ ಎಂದು ಸಚಿವರು ಇದೇ ಸಂದರ್ಬದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

Exit mobile version