7:07 AM Thursday 25 - December 2025

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಂನಲ್ಲಿ ಜರಿಹುಳು ಪತ್ತೆ!

ice cream
16/06/2024

ಆನ್ ​ಲೈನ್​ ಮೂಲಕ ತರಿಸಲಾಗಿದ್ದ ಕೋನ್​ ಐಸ್​ಕ್ರೀಂನಲ್ಲಿ ಮಾನವನ ಬೆರಳುಗಳು ಪತ್ತೆಯಾಗಿರುವ ಸುದ್ದಿ ಇತ್ತೀಚೆಗಷ್ಟೇ ಸಾರ್ವಜನಿಕರಿಗೆ ಶಾಕ್ ನೀಡಿತ್ತು.  ಇದೀಗ ಮತ್ತೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಹಕರಿಗೆ ಆತಂಕ ಸೃಷ್ಟಿಸಿದೆ.

ಹೌದು..! ಆನ್ ಲೈನ್ ಮೂಲಕ  ಆರ್ಡರ್ ಮಾಡಿದ್ದ ಐಸ್ ಕ್ರೀಂನಲ್ಲಿ ಜರಿಹುಳು(ಶತಪದಿ) ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈ ಸಿಟಿಯ ಮಲಾಡ್ ಪ್ರದೇಶದಲ್ಲಿ ನಡೆದಿದೆ.

ಮಹಿಳೆಯೊಬ್ಬರು ಬ್ಲಿಂಕಿಟ್‌ನಿಂದ ಅಮುಲ್‌ ಹೆಸರಾಂತ ಬ್ರಾಂಡ್‌ ನ ಐಸ್ ಕ್ರೀಮ್ ಅನ್ನು ಆರ್ಡರ್ ಮಾಡಿದ್ದಾರೆ. ಡೆಲಿವರಿ ಆದಮೇಲೆ ಆ ಮಹಿಳೆ ಐಸ್ ​ಕ್ರೀಮ್ ಬಾಕ್ಸ್ ತೆರೆದು ನೋಡಿದಾಗ ಆಕೆಗೆ ಶಾಕ್ ಆಗಿದ್ದು, ಐಸ್ ​ಕ್ರೀಮ್​ ನಲ್ಲಿ ಸತ್ತ ಜರಿ ಹುಳ ಪತ್ತೆಯಾಗಿದೆ.

ದೀಪಾ ಎಂಬ ಮಹಿಳೆ ನೋಯ್ಡಾದ ಸೆಕ್ಟರ್–12ರಲ್ಲಿ ವಾಸಿಸುತ್ತಿದ್ದಾರೆ. ಹೀಗೆ ಶನಿವಾರ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಬ್ಲಿಂಕಿಟ್‌ನಿಂದ ಐಸ್​ಕ್ರೀಮ್ ಅನ್ನು ಆರ್ಡರ್ ಮಾಡಿದ್ದರು. ಐಸ್​ಕ್ರೀಮ್ ಕಂಟೈನರ್​ ತೆರೆದಾಗ ಅದರ ಒಳಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಸತ್ತ ಜರಿ ಹುಳು ಪತ್ತೆಯಾಗಿತ್ತು.

ದೀಪಾ ದೇವಿ ಅವರು ಮಕ್ಕಳಿಗೆ ಮ್ಯಾಂಗೋ ಶೇಕ್ ಮಾಡಲು ಡೆಲಿವರಿ ಅಪ್ಲಿಕೇಶನ್‌ನಿಂದ ಐಸ್‌ಕ್ರೀಂ ಆರ್ಡರ್ ಮಾಡಿದ್ದರು. ಐಸ್​ಕ್ರೀಂ ಮುಚ್ಚುಳ ತೆಗೆದ ತಕ್ಷಣ ಹುಳು ಕಾಣಿಸಿತ್ತು, ಆ್ಯಪ್‌ನ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ್ದಾರೆ. ಕಂಪನಿಯು ತನ್ನ ತಪ್ಪನ್ನು ಒಪ್ಪಿಕೊಂಡು, ಐಸ್​ಕ್ರೀಂ ಹಣವನ್ನು ಹಿಂದಿರುಗಿಸಿತು.

ವಿಷಯದ ಬಗ್ಗೆ ಮಾಹಿತಿ ಪಡೆದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡವೂ ಸೆಕ್ಟರ್-12 ತಲುಪಿತು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಅವರು ಸೆಕ್ಟರ್ -22 ರಲ್ಲಿರುವ ಆಪ್ ಸ್ಟೋರ್‌ ಗೆ ತಲುಪಿದರು ಮತ್ತು ಆ ಬ್ಯಾಚ್ ಐಸ್ ಕ್ರೀಮ್ ಮಾರಾಟವನ್ನು ನಿಲ್ಲಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version