5:32 AM Saturday 15 - November 2025

ವಿದ್ಯಾರ್ಥಿನಿಯ ಮೇಲೆ ಕಾರಿನಲ್ಲಿ ಅತ್ಯಾಚಾರ: NSUI ಮಾಜಿ ಮುಖಂಡ ಅರೆಸ್ಟ್

ruhab meman
19/11/2022

ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI)ದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಯೋರ್ವನನ್ನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ.

ರುಹಾಬ್ ಮೆಮನ್‌(23) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಕಾಡಿನಲ್ಲಿ ತನ್ನ ಕಾರಿನಲ್ಲಿಯೇ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

NSUI ಹೇಳುವಂತೆ 23 ವರ್ಷದ ಆರೋಪಿ ರುಹಾಬ್ ಮೆಮನ್‌ನನ್ನು ನವೆಂಬರ್ 16 ರಂದು ಅಧಿಕೃತ ಆದೇಶದ ಮೂಲಕ ಸಂಘಟನೆಯಿಂದ ಹೊರಹಾಕಲಾಯಿತು, ಮರುದಿನ ಅತ್ಯಾಚಾರ ಆರೋಪ ಕೇಸ್ ನಲ್ಲಿ ಅವರನ್ನು ಬಂಧಿಸಲಾಗಿದೆ.

ಡಿಸೆಂಬರ್ 5 ರಂದು ನಡೆಯಲಿರುವ ಭಾನುಪ್ರತಾಪುರ್ ವಿಧಾನಸಭಾ ಉಪಚುನಾವಣೆಗೆ ಮೆಮನ್ ಚುನಾವಣಾ ಸಹ ಉಸ್ತುವಾರಿ ಆಗಿದ್ದರು. ರುಹಾಬ್ ಮತ್ತು ದೂರುದಾರರು ಒಬ್ಬರಿಗೊಬ್ಬರು ಪರಿಚಿತರು. ಆಕೆಯನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ನೆಪದಲ್ಲಿ ಕಂಕೇರ್ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿರುವ ವ್ಯಾಸ್ಕೊಂಗೇರಾ ಅರಣ್ಯಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version