ಕೆಎಸ್ ಆರ್ ಟಿಸಿ ಬಸ್ ನಲ್ಲಿ ‘ಲವ್ ಬರ್ಡ್ಸ್’ಗೆ ದುಬಾರಿ ಟಿಕೆಟ್: ಅಜ್ಜಿ ಮೊಮ್ಮಗಳು ಶಾಕ್

bus ticket
27/03/2024

ಬೆಂಗಳೂರು: ಅಜ್ಜಿ ಮತ್ತು ಮೊಮ್ಮಗಳಿಗೆ ಶಕ್ತಿ ಯೋಜನೆಯಿಂದ ಫ್ರೀ ಬಸ್ ಟಿಕೆಟ್ ಸಿಕ್ಕಿತು. ಆದ್ರೆ, ನಾಲ್ಕು ಲವ್ ಬರ್ಡ್ಸ್(ಹಕ್ಕಿ) ಗೆ ಕಂಡೆಕ್ಟರ್ ದುಬಾರಿ ಬೆಲೆಯ ಟಿಕೆಟ್ ನೀಡಿದ್ದು, ಈ ಟಿಕೆಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಅಜ್ಜಿ ಮತ್ತು ಮೊಮ್ಮಗಳು ಶಕ್ತಿ ಯೋಜನೆಯಡಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ತಮ್ಮ ಜೊತೆಗೆ ನಾಲ್ಕು ಲವ್ ಬರ್ಡ್ಸ್ ಹಕ್ಕಿಗಳನ್ನೂ ತೆಗೆದುಕೊಂಡು ಹೋಗಿದ್ದಾರೆ.

ಮೊಮ್ಮಗಳು ಹಾಗೂ ಅಜ್ಜಿಗೆ ಫ್ರೀ ಟಿಕೆಟ್ ನೀಡಿದ ಕಂಡೆಕ್ಟರ್ 4 ಲವ್ ಬರ್ಡ್ಸ್ ಗೆ 1 ಹಕ್ಕಿಗೆ 111 ರೂಪಾಯಿಯಂತೆ 444 ರೂಪಾಯಿಗಳ ಟಿಕೆಟ್ ನೀಡಿದ್ದಾರೆ.

ನಾಲ್ಕು ಲವ್ ಬರ್ಡ್ಸ್ ಗಳನ್ನು ನಾಲ್ಕು ಮಕ್ಕಳು ಎಂದು ಟಿಕೆಟ್ ನಲ್ಲಿ ನಮೂದಿಸಲಾಗಿದೆ. ಈ ಟಿಕೆಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version