ಇಡಿ ಜಪ್ತಿ ಮಾಡಿದ ಹಣ ಬಡವರಿಗೆ ನೀಡುತ್ತೇವೆ: ಪ್ರಧಾನಿ ಮೋದಿ

ನವದೆಹಲಿ: ಇಡಿ ಜಪ್ತಿ ಮಾಡಿದ ಹಣವನ್ನು ಹೊಸ ಸರ್ಕಾರ ಬಂದಾಗ ಬಡವರಿಗೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರೋದಾಗಿ ವರದಿಯಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ಕೃಷ್ಣನಗರದ ಬಿಜೆಪಿ ಅಭ್ಯರ್ಥಿ ಅಮೃತಾ ರಾಯ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ಮೋದಿ, ಇಡಿ ವಶಕ್ಕೆ ಪಡೆದ 3 ಸಾವಿರ ಕೋಟಿ ರೂಪಾಯಿಗಳನ್ನು ಬಡವರಿಗೆ ಯೋಜನೆಗಳ ಮೂಲಕ ಹಂಚಲು ಕಾನೂನು ತರಲು ಅಧ್ಯಯನ ನಡೆಸಲಾಗುತ್ತಿರುವುದಾಗಿ ಜನರಿಗೆ ತಿಳಿಸಲು ಹೇಳಿದ್ದಾರೆನ್ನಲಾಗಿದೆ.
ಬಿಜೆಪಿ ಭ್ರಷ್ಟಾಚಾರವನ್ನು ಬಡಸಮೇತ ಕೀಳಲು ಬದ್ಧವಾಗಿರುವ ಪಕ್ಷವಾಗಿದ್ದು, ಇಂಡಿಯಾ ಮೈತ್ರಿ ಕೂಟ ಮತ್ತು ಟಿಎಂಸಿ ಭ್ರಷ್ಟಾಚಾರಿಗಳ ಪರವಾಗಿ ನಿಲ್ಲುವ ಮೈತ್ರಿಕೂಟ ಎಂದು ಹೇಳಿದ್ದಾರೆ.
ಈ ವರದಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಚರ್ಚೆಗಳು ಆರಂಭವಾಗಿದ್ದು, ಕಳೆದ ಚುನಾವಣೆಗಳ ಸಂದರ್ಭದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿರುವ ಹಣ ತಂದು ಒಬ್ಬೊಬ್ಬ ಪ್ರಜೆಗೂ 15 ಲಕ್ಷ ಹಣ ಹಂಚುವ ಘೋಷಣೆಯಂತೆಯೇ ಇದೂ ಒಂದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth