ಟ್ವಿಟರ್ ಗೆ ಸಡ್ಡು ಹೊಡೆಯಲು ರೆಡಿಯಾಗ್ತಿದೆ ಫೇಸ್ ಬುಕ್ ಮೆಟಾ: ಟ್ವೀಟ್ ಗೆ ಪಂಚ್ ನೀಡುತ್ತಾ ‘ಥ್ರೆಡ್ಸ್‌ʼ..?

04/07/2023

ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಿಗ್ಗಜ ಆಗಿರುವ ಟ್ವಿಟರ್‌ಗೆ ಸ್ಪರ್ಧೆ ನೀಡಲು ಫೇಸ್‌ಬುಕ್‌ ಒಡೆತನದ ಮೆಟಾ ಸಜ್ಜಾಗುತ್ತಿದೆ. ಯಾಕೆಂದರೆ ಟ್ವಿಟರ್‌ ರೀತಿಯ ಮೈಕ್ರೋ ಬ್ಲಾಗಿಂಗ್‌ ಅಪ್ಲಿಕೇಶನ್‌ ಅನ್ನು ಪರಿಯಿಸುವುದಾಗಿ ಮೆಟಾ ಹೇಳಿದೆ.

ಟ್ವಿಟರ್‌ ಬಳಕೆದಾರರಿಗೆ ಸಾಲು ಸಾಲು ಷರತ್ತುಗಳನ್ನು ಟ್ವಿಟರ್‌ ವಿಧಿಸುತ್ತಿರುವುದರಿಂದ್ದ ಮೆಟಾ ಘೋಷಿಸಿದ ಹೊಸ ಆ್ಯಪ್‌ ಮೇಲೆ ನೆಟ್ಟಿಗರ ಗಮನ ಹೋಗಿದೆ.

ಮೆಟಾದ ಹೊಸ ಆ್ಯಪ್‌ಗೆ ‘ಥ್ರೆಡ್ಸ್‌ʼ ಎಂದು ಹೆಸರಿಟ್ಟಿದ್ದು, ಶೀಘ್ರದಲ್ಲೇ ಬಳಕೆಗೆ ಲಭ್ಯವಾಗಲಿದೆ.
ಇನ್ಸ್ಟಾಗ್ರಾಮ್‌ ಆಧಾರಿತ ಆ್ಯಪ್‌ ಇದಾಗಿರಲಿದ್ದು, ಇನ್ಸ್ಟಾಗ್ರಾಮ್‌ ಯೂಸರ್‌ ನೇಮ್‌ ಹಾಗೂ ಐಡಿಯನ್ನೇ ಹೊಸ ಆ್ಯಪ್‌ ನಲ್ಲಿ ಬಳಸಬಹುದು ಎಂದು ಮೆಟಾ ಮೂಲಗಳು ಹೇಳಿವೆ.

ಆ್ಯಪಲ್‌ ಸ್ಟೋರ್‌ ನಲ್ಲಿ ಆ್ಯಪ್‌ ಮೊದಲು ಲಭ್ಯವಾಗಲಿದ್ದು, ಗೂಗಲ್‌ ಸ್ಟೋರ್‌ ನಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version