9:50 PM Saturday 18 - October 2025

ಫೇಸ್ ಬುಕ್ ಕಂಪೆನಿಯ ಹೊಸ ಹೆಸರು ಬಹಿರಂಗಪಡಿಸಿದ ಮಾರ್ಕ್ ಜುಕರ್ ಬರ್ಗ್!

facebook new name meta
29/10/2021

ಫೇಸ್ ಬುಕ್ ಕಾರ್ಪೊರೇಟ್ ಕಂಪೆನಿಯ ಹೆಸರನ್ನು ಗುರುವಾರ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಫೇಸ್ ಬುಕ್ ನ ಮಾತೃಸಂಸ್ಥೆಯ ಹೆಸರು ‘ಮೆಟಾ’(Meta) ಎಂದು ಗುರುತಿಸಲ್ಪಡುತ್ತದೆ ಎಂದು ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಅವರು ಹೇಳಿದ್ದಾರೆ.

ಡೆವಲಪರ್‌ ಗಳ ವಾರ್ಷಿಕ ಸಮ್ಮೇಳನದಲ್ಲಿ ಈ ಘೋಷಣೆ ಮಾಡಿರುವ ಅವರು, ಮೆಟಾವು ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಒಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ವಿಷಯಗಳ ಜೊತೆಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಕಲಿತಿದ್ದು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ. ಇದರಲ್ಲಿ ನಮ್ಮ ಅಪ್ಲಿಕೇಷನ್‌ ಗಳು ಹಾಗೂ ಅವರು ಬ್ರಾಂಡ್‌ಗಳು ಬದಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫೇಸ್‌ ಬುಕ್ ಅನ್ನು ಈಗ ಮೆಟಾ(Facebook New Name Meta) ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಫೇಸ್‌ಬುಕ್‌ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಸೂಚಿಸಿದ್ದಾರೆ. ಚಾನ್ ಜುಕರ್‌ಬರ್ಗ್ ಇನಿಶಿಯೇಟಿವ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಬಯೋಮೆಡಿಕಲ್ ಸಂಶೋಧನಾ ಅನ್ವೇಷಣೆ ಸಾಧನವಾಗಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version