11:55 PM Tuesday 21 - October 2025

ಬಾಲಕನಿಗೆ ಕಚ್ಚಿದ ಹಾವು: ಮಗನನ್ನು ಬದುಕಿಸಲು ಮಂತ್ರವಾದಿ ಬಳಿ ಹೋದ ತಂದೆ..!

11/07/2023

ಮೂರು ವರ್ಷದ ತನ್ನ ಮಗನನ್ನು ಕಚ್ಚಿ ಸಾಯಿಸಿದ ನಾಗರಹಾವನ್ನೇ ಬಾಟಲಿಯೊಳಗೆ ತುಂಬಿಸಿಟ್ಟ ತಂದೆಯೋರ್ವ ಬಳಿಕ ಮಂತ್ರವಾದಿಯ ಬಳಿಗೆ ತೆರಳಿ ತನ್ನ ಮಗುವನ್ನು ಬದುಕಿಸುವುದಕ್ಕಾಗಿ ಪ್ರಯತ್ನ ಪಟ್ಟ ಆಘಾತಕಾರಿ ಘಟನೆ ಚತ್ತೀಸ್ ಗಡದಲ್ಲಿ ನಡೆದಿದೆ.

ಲಾಲ್ ಬಹದ್ದೂರ್ ಎಂಬ ಹೆಸರಿನ ಈ ತಂದೆಯ ಮೂರು ವರ್ಷದ ಮಗ ಆಶಿಶ್ ಮನೆಯಲ್ಲಿ ಮಲಗಿದ್ದಾಗ ಹಾವು ಬಂದು ಕಚ್ಚಿತ್ತು. ತಕ್ಷಣ ಮನೆಯವರು ಆ ಹಾವನ್ನು ಬಾಟಲಿಯೊಳಗೆ ಇಟ್ಟಿದ್ದಾರೆ. ಮಗುವನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಮಗು ಬದುಕುಳಿಯಲಿಲ್ಲ.

ಆದರೆ ತಂದೆ ಲಾಲ್ ಬಹದ್ದೂರ್ ಗೆ ಮಗನ ಸಾವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ತನ್ನ ಮಗ ಬದುಕಿದ್ದಾನೆ ಎಂದೇ ಅವರು ತಿಳಿದಿದ್ದರು. ಯಾವುದಾದರೂ ಓರ್ವ ಮಂತ್ರವಾದಿ ತನ್ನ ಮಗನನ್ನು ಬದುಕಿಸಬಲ್ಲ ಎಂದು ನಂಬಿದ್ದರು. ಆದರೆ ಅಂತಹ ಮಂತ್ರವಾದಿ ಸಿಕ್ಕದೆ ಹೋದಾಗ ಅವರು ನಿರಾಶೆಗೆ ಒಳಗಾದರು.

ಕೊನೆಗೆ ವೈದ್ಯರು ಅವರನ್ನು ಸಮಾಧಾನಿಸಿ ಮಗುವಿನ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿ ಬಳಿಕ ಬಿಟ್ಟುಕೊಟ್ಟರು. ಮಾತ್ರ ಅಲ್ಲ ಮೌಢ್ಯತೆಯ ಬಗ್ಗೆ ಕುಟುಂಬಕ್ಕೆ ಪಾಠ ಹೇಳಿದರು ಎಂದು ವರದಿಯಾಗಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version