ಐಸ್ ಕ್ರೀಂನಲ್ಲಿ ಬೆರಳು ಪತ್ತೆ ಪ್ರಕರಣ: ಕಾರ್ಮಿಕನ ಬೆರಳು ತುಂಡಾಗಿದ್ದು ಹೇಗೆ..?

ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಂನಲ್ಲಿ ಮಾನವ ಬೆರಳು ಸಿಕ್ಕಿದ ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಲಭ್ಯವಾಗಿವೆ. ಐಸ್ ಕ್ರೀಮ್ ಕಂಪನಿಯಾದ ಹೈಮೋದ ಫ್ಯಾಕ್ಟರಿಯಲ್ಲಿ ಮೇ 11ರಂದು ಉಂಟಾದ ಅಪಘಾತದಲ್ಲಿ ಕಾರ್ಮಿಕನ ಕೈಗೆ ಗಾಯವಾಗಿತ್ತು.
ಅಸಿಸ್ಟೆಂಟ್ ಪ್ಯಾಕಿಂಗ್ ಮ್ಯಾನೇಜರ್ ಆಗಿರುವ ಓಂಕಾರ್ ಪೋಟೆ ಎಂಬ 24 ವರ್ಷದ ಯುವಕನ ಮಧ್ಯದ ಬೆರಳು ಫ್ರೂಟ್ ಫೀಡರ್ ಮಷೀನ್ ನಲ್ಲಿ ಸಿಲುಕಿಕೊಂಡಿತ್ತು.
ಕೆಲಸದ ನಡುವೆ ಮೆಷಿನ್ ಆಫ್ ಆಗಿತ್ತು. ಅದನ್ನು ಸರಿಪಡಿಸುವ ವೇಳೆ ಸಡನ್ನಾಗಿ ಅದು ಚಾಲು ಆದ್ದರಿಂದ ಯುವಕನ ಬೆರಳಿಗೆ ಗಾಯವಾಗಿತ್ತು. ಆ ಬಳಿಕ ಯಂತ್ರವನ್ನು ಆಫ್ ಮಾಡಿ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಕಂಪನಿ ತಿಳಿಸಿದೆ. ಶುದ್ಧಿಗೊಳಿಸಿದ ಬಳಿಕ ಚಟುವಟಿಕೆ ಪ್ರಾರಂಭಿಸಲಾಗಿತ್ತು. ಆದರೆ ಯುವಕನ ಕೈಗೆ ಆಗಿರುವ ಗಾಯ ಮತ್ತು ಐಸ್ ಕ್ರೀಮ್ ನಲ್ಲಿ ಸಿಕ್ಕಿರುವ ಬೆರಳಿನ ತುಂಡಿಗೂ ನಡುವೆ ಹೋಲಿಕೆ ಆಗುತ್ತಿಲ್ಲ ಎಂದು ಕೂಡ ಕಂಪನಿ ಹೇಳಿದೆ. ಈಗಾಗಲೇ ಈ ಬೆರಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅದರ ಫಲಿತಾಂಶ ಬಂದ ಬಳಿಕವೇ ಈ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth