ಗಂಧದ ಮರ ಕಳ್ಳತನದ ವೇಳೆ ಫಾರೆಸ್ಟ್ ಗಾರ್ಡ್ ನಿಂದ ಗುಂಡಿನ ದಾಳಿ: ಆರೋಪಿ ಸ್ಥಳದಲ್ಲೇ ಸಾವು

banglore
30/08/2023

ಬೆಂಗಳೂರು ಗ್ರಾಮಾಂತರ (ಆನೇಕಲ್): ಕಳೆದ ಹಲವು ದಿನಗಳಿಂದ ಗಂಧದ ಮರ ಕಳ್ಳತನ ಮಾಡುತ್ತಿದ್ದ ಖದೀಮನ ಮೇಲೆ ಫಾರೆಸ್ಟ್ ಬೀಟ್ ಸಿಬ್ಬಂದಿ ಗುಂಡು ಹಾರಿಸಿದ್ದು, ಕಳ್ಳ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಲ್ಕೆರೆಯಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಗಂಧದ ಮರಗಳ ಕಳ್ಳತನವಾಗುತ್ತಿತ್ತು. ಈ ಹಿನ್ನೆಲೆ ಫಾರೆಸ್ಟ್ ಬೀಟ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ರಾತ್ರಿ 2 ಗಂಟೆಯ ಸುಮಾರಿಗೆ ಕಳ್ಳ ಗಂಧದ ಮರ ಕಳ್ಳತನಕ್ಕೆ ಬಂದಿದ್ದ. ಈ ವೇಳೆ ಬೀಟ್ ಫಾರೆಸ್ಟ್ ಗಾರ್ಡ್ ವಿನಯ್ ಗುಂಡು ಹಾರಿಸಿದ್ದಾರೆ.

ಗಸ್ತಿನ ವೇಳೆ ಕಳ್ಳನ ಮೇಲೆ ಫಾರೆಸ್ಟ್ ಗಾರ್ಡ್ ಫೈರಿಂಗ್ ಮಾಡಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version