ದನಗಾಹಿಗಳನ್ನು ಅಟ್ಟಾಡಿಸಿದ ಕಾಡಾನೆ: ಇಬ್ಬರು ಪ್ರಾಣಾಪಾಯದಿಂದ ಪಾರು!!

ಚಾಮರಾಜನಗರ: ದನಗಾಹಿಗಳನ್ನು ಕಾಡಾನೆ ಅಟ್ಟಾಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದಿನ್ನಳ್ಳಿ ಅರಣ್ಯದಲ್ಲಿ ನಡೆದಿದೆ.
ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಪಂ ವ್ಯಾಪ್ತಿಯ ಯರಗಬಾಳು ಗ್ರಾಮದ ಸಿದ್ದಮರಿ, ಗಿರಿಯಪ್ಪ ಗಾಯಗೊಂಡ ಸಹೋದರರಾಗಿದ್ದಾರೆ. ತಮಿಳುನಾಡಿನ ಆಡಿ ಜಾತ್ರೆಗೆ ತಮ್ಮ ದನಗಳನ್ನು ಮಾರಾಟ ಮಾಡಿ ಮಾರಾಟವಾಗದ ದನಗಳನ್ನು ವಾಪಾಸ್ ಕರೆತರುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು ಇಬ್ಬರನ್ನೂ ಅಟ್ಟಾಡಿಸಿದೆ.
ಕಾಡಿನ ರಸ್ತೆಯಲ್ಲಿ ಎದ್ದುಬಿದ್ದು ಸ್ವಲ್ಪದರಲ್ಲೇ ಬಚಾವಾದ ಇಬ್ಬರನ್ನೂ ಕಂಡ ಸ್ಥಳೀಯರು ರಾಮಪುರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw