ಮಲೆಮಾದಪ್ಪನ ದರ್ಶನಕ್ಕೆ ಹೊರಟಿದ್ದವರಿಗೆ ಶಾಕ್ ನೀಡಿದ ಗಜರಾಜ

ಚಾಮರಾಜನಗರ: ಮಲೆಮಾದಪ್ಪನ ದರ್ಶನಕ್ಕೆ ಹೊರಟಿದ್ದವರಿಗೆ ಬೆಳ್ಳಂ ಬೆಳಗ್ಗೆ ಗಜರಾಜ ಶಾಕ್ ನೀಡಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪೊನ್ನಾಚಿ–ತಾಳುಬೆಟ್ಟ ಮಾರ್ಗಮಧ್ಯೆ ನಡೆದಿದೆ.
ಇಂದು ಬೆಳಗ್ಗೆ ಏಳು ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಆನೆಯನ್ನು ಕಂಡು ಕೆಎಸ್ ಆರ್ ಟಿಸಿ ಬಸ್ ಚಾಲಕ ದೂರದಲ್ಲೇ ಬಸ್ ನಿಲ್ಲಿಸಿದ್ದಾರೆ. ಆದ್ರೆ, ಬಸ್ ನ್ನು ಕಂಡು ಆನೆ ಘರ್ಜಿಸುತ್ತಾ ಬಸ್ ಕಡೆಗೆ ಓಡಿ ಬಂದಿದೆ.
ತಕ್ಷಣವೇ ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ ಬಸ್ ನ್ನು ವೇಗವಾಗಿ ಹಿಮ್ಮುಖವಾಗಿ ಚಲಿಸಿದ್ದಾರೆ. ಇದರಿಂದಾಗಿ ಕೆಲ ಹೊತ್ತಿನ ಬಳಿಕ ಆನೆ ಶಾಂತವಾಗಿ ಬಸ್ ಗೆ ದಾರಿ ಮಾಡಿಕೊಟ್ಟಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅನಾಹುತವೊಂದು ತಪ್ಪಿದಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw