ಧರ್ಮಸ್ಥಳದಲ್ಲಿ ವಾಕ್ ಸ್ವಾತಂತ್ರ್ಯ RIP?: ಭಕ್ತರೋ, ಗೂಂಡಾಗಳೋ?

dharmasthala
06/08/2025

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಒಂದೆಡೆ ಬಿರುಸಿನ ತನಿಖೆ ನಡೆಸುತ್ತಿದೆ. ದೂರುದಾರ ಸಾಕ್ಷಿ ಹೇಳಿದಂತೆ, ಹಲವು ಕಳೇಬರಗಳು ಕೂಡ ದೊರಕುತ್ತಿದೆ. ಖಂಡಿತವಾಗಿಯೂ ಮೃತದೇಹವನ್ನು ಹೂತು ಹಾಕಿಸಿದ ಅಪರಾಧಿಗಳನ್ನು ಖಂಡಿತಾ ಎಸ್ ಐಟಿ ಅಧಿಕಾರಿಗಳು ಕಂಡು ಹಿಡಿಯುತ್ತಾರೆ ಅನ್ನೋ ವಿಶ್ವಾಸ ಜನರಲ್ಲಿ ಹೆಚ್ಚಿದೆ. ಈ ನಡುವೆ ಈ ಪ್ರಕರಣವನ್ನು ಬೆನ್ನು ಬಿಡದೇ ಯಾವುದೇ ಲೋಪವಾಗದಂತೆ ನಿರಂತರವಾಗಿ ಕಾನೂನು ಬದ್ಧವಾಗಿ ವರದಿಗಾರಿಕೆ ಮಾಡುತ್ತಿರುವ ಯೂಟ್ಯೂಬರ್ ಗಳ ಮೇಲೆ ಭಕ್ತರ ಸೋಗಿನಲ್ಲಿ ಬಂದ ಗೂಂಡಾಗಳು  ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ.

ಸೌಜನ್ಯಾ ಮನೆಗೆ ನಟ ರಜತ್ ಆಗಮಿಸಿದ್ದು, ಬಳಿಕ ಬೆಂಗಳೂರಿಗೆ ಹೊರಡಲು ಮುಂದಾಗುತ್ತಿದ್ದ ವೇಳೆ ಯೂಟ್ಯೂಬರ್ ಗಳು ರಜತ್ ಅವರ ಜೊತೆಗೆ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಗೂಂಡಾಗಳು ಏಕಾಏಕಿ ಯೂಟ್ಯೂಬರ್ಸ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಜತ್ ಹೇಳುವಂತೆ 2 ಟಾಟಾ ಸುಮೋ( ಬ್ಲಾಕ್ ಕಲರ್) , ಒಂದು ಓಮ್ನಿ, ಒಂದು ಮಾರುತಿ ಸುಜುಕಿ ಕಾರು, ದ್ವಿಚಕ್ರ ವಾಹನಗಳು, ಆಟೋದಲ್ಲಿ ಬಂದವರು ಕುಡ್ಲ ರಾಂಪೇಜ್ ನ ಅಜಯ್ ಅಂಚನ್ ಮತ್ತು ಇತರ ಯೂಟ್ಯೂಬರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಅವರ ಕ್ಯಾಮರಾಗಳನ್ನು ಒಡೆದು ಹಾಕಿದ್ದಾರೆ. ಸಿಕ್ಕಾಪಟ್ಟೆ ಹೊಡೆದು, ತುಂಬಾ ಕೆಟ್ಟ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಡ್ಯಾಮೇಜ್ ಆಗುವಂತೆಲ್ಲ ಹೊಡೆದಿದ್ದಾರೆ ಅಂತ ರಜತ್ ಹೇಳಿದ್ದಾರೆ.

ಅಲ್ಲದೇ, ಮಧ್ಯಾಹ್ನದ ಸಮಯದಲ್ಲಿ ನಾವೆಲ್ಲ ಇದ್ದಾಗಲೇ ಇಲ್ಲಿ ಹೀಗೆಲ್ಲ ಮಾಡ್ತಿದ್ದಾರೆ ಅಂತಾದ್ರೆ, ರಾತ್ರಿ ಹೊತ್ತು ಯಾರ್ಯಾರನ್ನೋ ಇವರು ಏನೇನು ಮಾಡಿರ್ಬಹುದು ಎನ್ನುವುದು ನನಗೆ ಒಂದು ದೊಡ್ಡ ಪ್ರಶ್ನೆ,  ಈಗ ಏನೇನು ಆಗ್ತಿದೆಯೋ ಅದು ಒಳ್ಳೆಯ ಬೆಳವಣಿಗೆ ಅಲ್ವೇ ಅಲ್ಲ, ತಂಡದಲ್ಲಿ 50—60 ಜನ ಇದ್ರು ಎಂದು ರಜತ್ ಹೇಳಿದ್ದಾರೆ.

ರಜತ್ ನೀಡಿರುವ ಹೇಳಿಕೆ:

YouTube video player


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version