12:17 AM Thursday 21 - August 2025

ಗಣೇಶೋತ್ಸವ ಮೆರವಣಿಗೆಯಲ್ಲಿ ಚಾಕು ಹಿಡಿದು ಗಣೇಶನ ವಿಗ್ರಹಕ್ಕೆ  ಧಮ್ಕಿ ಹಾಕಿದ ಯುವಕ!

ganeshothsava
09/09/2022

ಬೆಂಗಳೂರು: ಗಣೇಶೋತ್ಸವದ ಮೆರವಣಿಗೆಯಲ್ಲಿ ಯುವಕನೋರ್ವ ಚಾಕು ಹಿಡಿದು ಗಣೇಶನ ವಿಗ್ರಹಕ್ಕೆ ಧಮ್ಕಿ ಹಾಕಿರುವ ಘಟನೆ  ಯಶವಂತಪುರ ಬಳಿಯ ದೇವರಾಯಪಾಳ್ಯದಲ್ಲಿ ನಡೆದಿದೆ.

ದೇವರಾಯಪಾಳ್ಯದಲ್ಲಿ ನಿನ್ನೆ ರಾತ್ರಿ ವೇಳೆ ಗಣೇಶೋತ್ಸವ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಚಾಕು ಹಿಡಿದುಕೊಂಡು ಬಂದ ಯುವಕ ವಿಚಿತ್ರವಾಗಿ ವರ್ತಿಸಿದ್ದು, ಚಾಕು ಹಿಡಿದು ಗಣೇಶನ ಮೂರ್ತಿಗೆ ಧಮ್ಕಿ ಹಾಕಿದ್ದಾನೆ.

ಇದೇ ವೇಳೆ ಯುವಕ 20ಕ್ಕೂ ಹೆಚ್ಚಿನ ಕಾರಿನ ಗಾಜುಗಳನ್ನು ಒಡೆದು ದುರ್ವರ್ತನೆ ತೋರಿದ್ದು,  ಯುವಕನ ಹುಚ್ಚಾಟ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಪೊಲೀಸರು ಯುವಕನನ್ನು ಬಂಧಿಸಿ, ಮುಂದಿನ ಕ್ರಮ ಜರಗಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version