9:30 PM Thursday 16 - October 2025

ಗಂಗಾನದಿಗೆ ಉರುಳಿದ ಜೀಪು | 10 ಪ್ರಯಾಣಿಕರು ನಾಪತ್ತೆ

ganga
23/04/2021

ಪಾಟ್ನಾ: ಗಂಗಾ ನದಿಗೆ ಜೀಪ್ ಉರುಳಿ ಬಿದ್ದ ಪರಿಣಾಮ 10 ಪ್ರಯಾಣಿಕರು ನಾಪತ್ತೆಯಾಗಿರುವ ಘಟನೆ ಪಾಟ್ನಾದ ಪೀಪಾಪುಲ್ ನಡೆದಿದೆ. ಇಲ್ಲಿನ ಸೇತುವೆಯ ಮೇಲೆ ಜೀಪ್ ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

15 ಪ್ರಯಾಣಿಕರನ್ನು ಹೊತ್ತಿದ್ದ ಜೀಪ್  ಪೀಪಾ ಸೇತುವೆ ಮೇಲೆ ಸಾಗುತ್ತಿತ್ತು. ಆದರೆ ಆಯತಪ್ಪಿ ನದಿಗೆ ಉರುಳಿಬಿದ್ದಿದೆ. ಈ ವೇಳೆ ಬ್ರಿಡ್ಜ್ ರೇಲಿಂಗ್  ಮುರಿದು ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ 10 ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಖಿಲ್ ಪುರ ಮೂಲದ ಪ್ರಯಾಣಿಕರು ನೀರುಪಾಲಾದವರಾಗಿದ್ದಾರೆ. ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version