4:05 AM Thursday 16 - October 2025

ಗಂಗೂಲಿ ಹೃದಯಾಘಾತದ ಕಾರಣ ಅದಾನಿ ವಿಲ್ಮರ್ ಸಂಸ್ಥೆಯ ಆಯಿಲ್ ಗೆ ಸಂಕಷ್ಟ!

05/01/2021

ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅದಾನಿ ವಿಲ್ಮರ್ ಸಂಸ್ಥೆಯು ಗಂಗೂಲಿ ಅವರ ಜಾಹೀರಾತುಗಳಿಗೆ ತಡೆಯೊಡ್ಡಿದೆ.

ಫಾರ್ಚೂನ್ ರೈಸ್ ಬ್ರಾನ್ ಕುಕ್ಕಿಂಗ್ ಆಯಿಲ್ ಹೆಸರಿನ ಅಡುಗೆ ಎಣ್ಣೆಯನ್ನು ಉತ್ಪಾದಿಸುತ್ತಿರುವ ಅದಾನಿ ವಿಲ್ಮರ್ ಸಂಸ್ಥೆ ಸೌರವ್ ಗಂಗೂಲಿ ಅವರನ್ನು ತಮ್ಮ ಜಾಹೀರಾತಿನಲ್ಲಿ ಬಳಸಿತ್ತು.  ಈ ಜಾಹೀರಾತಿನಲ್ಲಿ ಸೌರವ್ ಗಂಗೂಲಿ ಅವರು, “ಹೃದಯ ಸಂಬಂಧಿ ತೊಂದರೆಗಳಿಂದ ದೂರವಿಡಲು ಅದಾನಿ ಫಾರ್ಚೂನ್ ರೈಸ್ ಬ್ರಾನ್ ಕುಕ್ಕಿಂಗ್ ಆಯಿಲ್ ಬಳಸಿ” ಎಂದು ಹೇಳಿದ್ದರು.

ಆದರೆ, ಫಾರ್ಚೂನ್ ರೈಸ್ ಬ್ರಾನ್ ಕುಕ್ಕಿಂಗ್ ಆಯಿಲ್ ಸೇವಿಸಿದ ಗಂಗೂಲಿ ಅವರಿಗೆ ಹೃದಯಾಘಾತವಾಗಿದೆ. ನಾವು ನಿಮ್ಮ ಸಂಸ್ಥೆಯನ್ನು ನಂಬ ಬಹುದೇ ಎಂದು ಅನೇಕ ಗ್ರಾಹಕರು ಸಂಸ್ಥೆಯನ್ನು ಅನುಮಾನಿಸಿದ್ದರು. ಅಲ್ಲದೇ ಈ ಬಗ್ಗೆ ಸಂಸ್ಥೆಯ ಬಗ್ಗೆ  ಟ್ವಿಟ್ಟರ್ ನಲ್ಲಿ ವ್ಯಾಪಕ ಟ್ರೋಲ್ ಮಾಡಲಾಗಿತ್ತು.

ಸೌರವ್ ಗಂಗೂಲಿ ಅವರನ್ನುಜಾಹೀರಾತಿಗೆ ಬಳಸಿಕೊಂಡ ಕಾರಣ ನಮಗೆ ಈ ಆಯಿಲ್ ನ ಅಸಲಿಯತ್ತು ಗೊತ್ತಾಗಿದೆ. ಬೇರೆ ಯಾರಾದರೂ ಅಪರಚಿತ ಮುಖಗಳನ್ನು ಈ ಜಾಹೀರಾತಿಗೆ ಹಾಕಿಕೊಂಡಿದ್ದರೆ, ಗ್ರಾಹಕರ ಪರಿಸ್ಥಿತಿ ಏನು ಎಂದು ಗ್ರಾಹಕರು ಕೇಳಿದ್ದಾರೆ. ಈ ಎಲ್ಲ ವಿದ್ಯಮಾನಗಳ ನಡುವೆಯೇ ಅದಾನಿ ವಿಲ್ಮರ್ ಸಂಸ್ಥೆ ಈ ಜಾಹೀರಾತಿನ ಪ್ರಸಾರಕ್ಕೆ ಬ್ರೇಕ್ ಹಾಕಿದೆ.

https://twitter.com/pj77in/status/1345426984688500737?s=20

 

ಇತ್ತೀಚಿನ ಸುದ್ದಿ

Exit mobile version