9:56 AM Saturday 25 - October 2025

ಗ್ಯಾಸ್ ಸಿಲಿಂಡರ್ ಸ್ಫೋಟ: ಪುಣೆಯಲ್ಲಿ ನಾಲ್ಕು ಬಸ್‌ ಗಳು ಬೆಂಕಿಗಾಹುತಿ

09/10/2023

ಗ್ಯಾಸ್ ಸಿಲಿಂಡರ್‌ ಸ್ಫೋಟಗೊಂಡು ಭಾರೀ ಅಗ್ನಿ ಅವಘಡ ಸಂಭವಿಸಿ ನಾಲ್ಕು ಬಸ್‌ ಗಳೂ ಬೆಂಕಿಗಾಹುತಿಯಾಗಿರುವ ಘಟನೆ ಪುಣೆಯ ತಥಾವಾಡೆ ಪ್ರದೇಶದಲ್ಲಿ ನಡೆದಿದೆ. ಗ್ಯಾಸ್ ಸಿಲಿಂಡರ್ ಗಳು ಸ್ಫೋಟಗೊಂಡು ಹತ್ತಿರದಲ್ಲಿದ್ದ ನಾಲ್ಕು ಬಸ್ ಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದ ಭಾರೀ ಶಬ್ಧದಿಂದ ಅಕ್ಕಪಕ್ಕ ಪ್ರದೇಶದ ಜನ ಭಯಭೀತರಾಗಿದ್ದರು.

ಅಲ್ಲದೆ, ಕೆಲ ನಿವಾಸಿಗಳು ಸಿಲಿಂಡರ್ ಸ್ಫೋಟಗೊಳ್ಳುವುದನ್ನು ವಿಡಿಯೋ ಮಾಡಿದ್ದಾರೆ.
ಈ ಬಗ್ಗೆ ಪಿಂಪ್ರಿ ಚಿಂಚ್ ವಾಡ್ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ನಾಲ್ಕು ಗ್ಯಾಸ್ ಸಿಲಿಂಡರ್‌ ಗಳ ಸರಣಿ ಸ್ಫೋಟವಾಗಿದೆ. ಸ್ಫೋಟ ಸಂಭವಿಸಿದ ಸ್ಥಳದ ಪಕ್ಕದಲ್ಲಿ ಗ್ಯಾಸ್ ಟ್ಯಾಂಕರ್ ನಿಂತಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಟ್ಯಾಂಕರ್ ಸ್ಫೋಟಗೊಂಡಿಲ್ಲ.

ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕದಳ ಸ್ಥಳಕ್ಕಾಮಿಸಿದ್ದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

“ಈ ವ್ಯವಹಾರದಲ್ಲಿ ತೊಡಗಿರುವ ಜನರನ್ನು ನಾವು ಹುಡುಕುತ್ತಿದ್ದೇವೆ. ಗ್ಯಾಸ್ ತುಂಬುವಿಕೆಯನ್ನು ಕಾನೂನುಬಾಹಿರವಾಗಿ ಮಾಡಲಾಗುತ್ತಿತ್ತು ಎಂದು ನಂಬಲು ಅನೇಕ ಸಾಕ್ಷಿ ಸಿಕ್ಕಿದೆ. ಸ್ಫೋಟದ ನಂತರ ಇದರಲ್ಲಿ ಭಾಗಿಯಾಗಿರುವ ಜನರು ಸ್ಥಳದಿಂದ ಪರಾರಿಯಾಗಿರಬಹುದು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version