8:33 AM Saturday 1 - November 2025

ಸರ್ಕಾರ ಪ್ರಾಮಾಣಿಕ ಸರ್ಕಾರ ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡ್ಲಿ: ಡಿಕೆಶಿಗೆ ಸಿ.ಟಿ.ರವಿ ಸವಾಲು

c t ravi
13/08/2023

ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಪ್ರಾಮಾಣಿಕ ಸರ್ಕಾರ ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡ್ಲಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಸವಾಲು ಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಇದು ನಮ್ಮ ಆರೋಪವಲ್ಲ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಆರೋಪ. ಡಿಕೆಶಿಗೆ ಅಜ್ಜಯ್ಯನ ಮಠದ ಬಗ್ಗೆ ಇರುವ ಭಕ್ತಿಗೆ ಅಲ್ಲಿಗೆ ಕರೆದಿದ್ದಾರೆ. ನಾವು ತಪ್ಪೇ ಮಾಡಿಲ್ಲ ಅಂದ್ರೆ ಹೋಗಿ ಪ್ರಮಾಣ ಮಾಡಬಹುದಲ್ವಾ…? ಎಂದು ಅವರು ಪ್ರಶ್ನಿಸಿದ್ರು.

ಗುತ್ತಿಗೆದಾರರ ಬಳಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮೊದಲು 7% ಫಿಕ್ಸ್ ಮಾಡಿದ್ರು, ಹೊಸದಲ್ಲ, ಹಳೇಯದ್ದಕ್ಲೆಲ್ಲಾ ಸೇರಿಸಿ, ಮದ್ಯವರ್ತಿಗಳು 10% ಅಂದ್ರು ಆಮೇಲೆ ಚರ್ಚೆ ಮಾಡಿ 15% ಆದ್ರೆ ಮಾತ್ರ ಕ್ಲಿಯರ್ ಎಂದಿದ್ದಾರೆ. ಆರೋಪ ಗುತ್ತಿಗೆದಾರರ‌ ಸಂಘದ್ದು, ಸುಳ್ಳು ಅನ್ನೊದಾದ್ರೆ ಅಜ್ಜಯ್ಯನ ಮಠ ಹೋಗಿ ಸತ್ಯ ಮಾಡ್ಲಿ, ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಅವರು ಸವಾಲು ಹಾಕಿದ್ರು.

ಇತ್ತೀಚಿನ ಸುದ್ದಿ

Exit mobile version