7:14 AM Thursday 20 - November 2025

ಭಾರತದ ಈ ನಗರದಲ್ಲಿ ‘ಗೋಬಿ ಮಂಚೂರಿ’ ನಿಷೇಧ!

gobi
05/02/2024

ನವದೆಹಲಿ: ಗೋಬಿ ಮಂಚೂರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಭಾರತದ ಯಾವುದೇ ನಗರದಲ್ಲೂ ಗೋಬಿ ಮಂಚೂರಿಯ ಸಿಕ್ಕೇ ಸಿಗುತ್ತದೆ. ಜಾತ್ರೆಗಳಲ್ಲಿ, ಹಬ್ಬಗಳಲ್ಲಿ, ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗೋಬಿ ಮಂಚೂರಿ ಸ್ಟಾಲ್ ಗಳು ಇದ್ದೇ ಇರುತ್ತವೆ. ಆದ್ರೆ ಭಾರತದ ನಗರವೊಂದರಲ್ಲಿ ಗೋಬಿ ಮಂಚೂರಿಯನ್ನು ನಿಷೇಧ ಮಾಡಲಾಗಿದೆ.

ಪ್ರವಾಸಿಗರ ಸ್ವರ್ಗ ಎಂದೇ ಪ್ರಖ್ಯಾತಿ ಹೊಂದಿರುವ ಗೋವಾದ ನಗರವಾದ ಮಾಪುಸಾ(Mapusa)ದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಗೋಬಿ ಮಂಚೂರಿ ಜನಪ್ರಿಯ ಆಹಾರವಾಗಿದ್ದರೂ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಗರದಲ್ಲಿ ಗೋಬಿ ಮಂಚೂರಿಯನ್ನು ನಿಷೇಧ ಮಾಡಲಾಗಿದೆಯಂತೆ.

ಗೋಬಿ ಮಂಚೂರಿಗೆ ಬಳಸುವ ಬಣ್ಣ ಹಾಗೂ ಸರಿಯಾದ ಶುಚಿತ್ವ ಇಲ್ಲದೇ ಗೋಬಿ ಮಂಚೂರಿಯನ್ನು ತಯಾರಿಸುವ ವಿಧಾನಗಳ ಹಿನ್ನೆಲೆಯಲ್ಲಿ ಗೋಬಿ ಮಂಚೂರಿಯನ್ನು ಗೋವಾದ ಮಾಪುಸಾ ನಗರದಲ್ಲಿ ನಿಷೇಧಿಸಲಾಗಿದೆ.

ಇತ್ತೀಚೆಗೆ ಚೈನಿಸ್ ಸ್ಟ್ರೀಟ್ ಫೂಡ್ ಗಳು ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತಿದೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಆರೋಗ್ಯಾಧಿಕಾರಿಗಳು ಸ್ಟ್ರೀಟ್ ಫೂಡ್ ಗಳು ಮತ್ತು ಹೊಟೇಲ್ ಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಕೂಡ ಭಾರೀ ಕಡಿಮೆಯಾಗಿವೆ. ಇಂತಹ ಸಂದರ್ಭದಲ್ಲಿ ಗೋವಾದ ನಾಗರಿಕ ಸಂಸ್ಥೆ ಮಾಪುಸಾ ಮುನ್ಸಿಪಲ್ ಕೌನ್ಸಿಲ್, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತೆಗೆದುಕೊಂಡ ದಿಟ್ಟ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

Exit mobile version