10:10 PM Tuesday 27 - January 2026

ಶಬರಿಮಲೆ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್: KSRTCಯಿಂದ ಐರಾವತ ವೋಲ್ವೋ ಬಸ್ ಸೇವೆ

ksrtc (1)
05/12/2024

ಬೆಂಗಳೂರು: ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ ಆರ್ ಟಿಸಿಯು ಬೆಂಗಳೂರು ಮತ್ತು ಕೇರಳದ ಪಂಪಾ ನಡುವೆ ಐರಾವತ ವೋಲ್ವೊ ಬಸ್ ಸೇವೆ ಆರಂಭಿಸಿದೆ.

ಶಾಂತಿ ನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1:50ಕ್ಕೆ ವೋಲ್ವೊ ಬಸ್ ಹೊರಡಲಿದೆ. ಮೈಸೂರು ರಸ್ತೆ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ 2:20ಕ್ಕೆ ಹೊರಟು ಸಂಜೆ 5:10ಕ್ಕೆ ಮೈಸೂರು ತಲುಪಲಿದೆ. ಮರುದಿನ ಬೆಳಗ್ಗೆ 6:45ಕ್ಕೆ ನಿಲಕ್ಕಲ್ ಬಸ್ ನಿಲ್ದಾಣವನ್ನು ತಲುಪಲಿದೆ.

ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶ ನೀಡಲಾಗಿದ್ದು, ಬರುವಾಗ ನಿಲಕ್ಕಲ್ ಬಸ್ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಪ್ರತಿದಿನ ಸಂಜೆ 6ಕ್ಕೆ ನಿಲಕ್ಕಲ್ ನಿಂದ ವೋಲ್ವೊ ಬಸ್ ಹೊರಡಲಿದ್ದು, ಮರುದಿನ ಬೆಳಗ್ಗೆ 10ಕ್ಕೆ ಮೆಜೆಸ್ಟಿಕ್ ತಲುಪಲಿದೆ.

ನಿಮ್ಮ ಹತ್ತಿರದ ಖಾಸಗಿ ಟಿಕೆಟ್ ಕೌಂಟರ್ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕ್ಕಿಂಗ್ ಕೌಂಟರ್ ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ವೆಬ್ ಸೈಟ್ https://www.ksrtc.in/ ಟಿಕೆಟ್ ಬುಕ್ಕಿಂಗ್ ಮಾಡಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version